ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಡೀ ಅನಾಹುತಕ್ಕೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಅನ್ನೋ ವರದಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಸಿಎಂ ಸಿದ್ದರಾಮಯ್ಯ ಸಂಪುಟದಿಂದ ವಜಾ ಮಾಡಬೇಕು ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ
ನಗರದಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿ ಆಗಲು ಯೋಗ್ಯರು ಇದ್ದೀರಾ? ಅವರೇ ವೈದ್ಯರಾ? ನಾವು ಸದನದಲ್ಲಿ ವೆಟನರಿ ಔಷಧಿ ಕೊಟ್ರು ಅಂತ ಆರೋಪ ಮಾಡಿದಾಗ ಯೂಟರ್ನ್ ಹೊಡೆದಿದ್ರಿ. ಈಗ ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಮತ್ತು ದ್ರಾವಣ ಕೂಡ ಕಳಪೆ ಆಗಿದೆ ಅಂತ ರಿಪೋರ್ಟ್ ಬಂದಿದೆ. ಹೀಗಿದ್ರು ದಿನೇಶ್ ಗುಂಡೂರಾವ್ ಬದಲಾವಣೆ ಮಾಡಿಲ್ಲ. ಆರೋಗ್ಯ ಇಲಾಖೆ ಅವರು ಜನರ ಜೀವಗಳ ಜೊತೆ ಆಟ ಆಡ್ತಿದ್ದಾರೆ. ಕೂಡಲೇ ದಿನೇಶ್ ಗುಂಡೂರಾವ್ರನ್ನ ವಜಾ ಮಾಡಬೇಕು ಅಂತ ಸಿಎಂರನ್ನ ಒತ್ತಾಯಿಸಿದ್ದಾರೆ.