ಬೆಂಗಳೂರು: ಅಲ್ಲಿ ಬ್ರೋಕರ್ ಗಳ್ದೇ ಆಟ.. ಅವರು ಫಿಕ್ಸ್ ಮಾಡಿದ್ದೇ ರೇಟ್ . ಅವರ ಆಟಕ್ಕೆ ಅಲ್ಲಿನ ಅಧಿಕಾರಿಗಳೇ ಸಪೋರ್ಟ್ ಇದರಿಂದ ಜಿಲ್ಲಾಡಳಿತ ಅಂಗಳದಲ್ಲಿ ನಿತ್ಯವೂ ಕಿರಿಕಿರಿ. ಇದೆಕ್ಕೆಲ್ಲಾ ಬ್ರೇಕ್ ಹಾಕಬೇಕು ಅಂತ ಬೆಂಗಳೂರು ಜಿಲ್ಲಾಡಳಿತ ಕಚೇರಿಯ ಎಲ್ಲಾ ವಿಭಾಗಗಳು ಕಾರ್ಯವೈಖರಿ ಬದಲಾಗಲಿದೆ.ಹೌದು ನಗರದ ಭ್ರಷ್ಟ ಕೂಪವಾಗಿರೋ ಜಿಲ್ಲಾಡಳಿತ ಇನ್ಮೇಲೆ ಕಂಪ್ಯೂಟರ್ ಕರಣ ಆಗ್ತಿದೆ..
ಬೆಂಗಳೂರು ನಗರ ಕಂದಾಯ ಇಲಾಖೆ ಆವರಣದಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಾಗಿದೆ ಅನ್ನೋದು ಇವತ್ತು ನಿನ್ನೆಯ್ದಲ್ಲ. ಇದಕ್ಕೆ ಬ್ರೇಕ್ ಹಾಕಬೇಕು ಅಂತ ಬೆಂಗಳೂರು ನಗರ ಡಿಸಿ ಕೆಎ ದಯಾನಂದ್ ಇದೀಗ ಹೆಜ್ಜೆ ಇಟ್ಟಿದ್ದಾರೆ. ಕಂದಾಯ ಇಲಾಖೆಯಲ್ಲಿ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇ ಆಡಳಿತ ಮಾಡಿದೆ. ಈ ಮೊದಲು ಕಡತಗಳು ತಿಂಗಳುಗಟ್ಟಲೇ ವಿಲೇವಾರಿ ಆಗದೆ ಕಚೇರಿಗೆ ಸಾರ್ವಜನಿಕರು ಅಲೆದಾಡಬೇಕಿದೆ ಎಂಬುದು ನಾಗರಿಕರ ಪ್ರಮುಖ ತಗಾದೆ ಇತ್ತು. ಇದಕ್ಕೆ ಕಡಿವಾಣ ಹಾಕಿ ಕಡತ ವಿಲೇವಾರಿಯಲ್ಲಿ ತ್ವರಿತ ಹಾಗೂ ಪಾರದರ್ಶಕ ವ್ಯವಸ್ಥೆ ತರಬಯಸಲು ಎಲ್ಲಾ ವಿಭಾಗಗಳ ಕಡತ ನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡಿ,ಇಡೀ ನಗರ ಜಿಲ್ಲಾಡಳಿತ ಕಚೇರಿಯನ್ನು ಡಿಜಿಟಲ್ ಮಾಡಲಾಗ್ತಿದೆ. .
ಇ-ಆಡಳಿತ ಇಲಾಖೆಯ ತಂತ್ರಜ್ಞರು ಹಾಗೂ ತರಬೇತಿದಾರರು ಕಡತ ವಿಲೇವಾರಿ ಕುರಿತು ಮಾಹಿತಿ ನೀಡುತ್ತಿದ್ದಾರೆ. ಎಫ್ಡಿಎಯಿಂದ ಆರಂಭವಾಗುವ ಕಡತ ಸೃಷ್ಟಿ ಬಳಿಕ ಮೇಲ್ವಿಚಾರಕರು, ಅಧೀಕ್ಷಕರು, ವಿಭಾಗದ ಮುಖ್ಯಸ್ಥರು ಹಾಗೂ ಎಸಿ, ಮ್ಯಾನೇಂಜರ್ , ಜಿಲ್ಲಾಧಿಕಾರಿ ಆಯುಕ್ತರವರೆಗೂ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಕಡತ ವಿಲೇಗೆ ಇಂತಿಷ್ಟು ದಿನ ನಿಗದಿ ಮಾಡಲಾಗುತ್ತದೆ. ಬಿಡಿಎ ಎಸಿ, ತಹಶೀಲ್ದರ್ ಜಿಲ್ಲಾಧಿಕಾರಿಗಳು ತುರ್ತು ಕಡತಗಳನ್ನು ರಜೆ ದಿನ ಅಥವಾ ಪ್ರವಾಸಕ್ಕೆ ತೆರಳಿದ ಸ್ಥಳದಿಂದಲೂ ನಿರ್ವಹಿಸಲು ಅವಕಾಶ ಇರುತ್ತದೆ. ಇದಕ್ಕಾಗಿ ಇ-ಆಡಳಿತ ಇಲಾಖೆ ರೂಪಿಸಿರುವ ತಂತ್ರಾಂಶ ಬಳಸಿಕೊಳ್ಳಲಾಗುತ್ತದೆ.
ಬೈಟ್ ಕೆ. ಎ ದಯಾನಂದ್ ಬೆಂಗಳೂರು ನಗರ ಜಿಲ್ಲಾಧಿಕಾರಿ
ಜಿಲ್ಲಾಡಳಿತ ಕಡತ ವಿಲೇವಾರಿಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಇದೆ.ಖಾತೆ,, ಒಸಿ, ಭೂ ಪರಿವರ್ತನೆ, ಪೋಡಿ ಕಡತಗಳನ್ನು ಮಧ್ಯವರ್ತಿಗಳೇ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಹೊತ್ತೊಯ್ದು ಕೆಲಸ ಮಾಡಿಸಿಕೊಳ್ಳುತ್ತಾರೆ. ಇದು ಇತರ ಕೆಲಸಗಳಿಗೆ ಅಡ್ಡಿಯಾಗುತ್ತಿದ್ದರೂ, ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿತ್ತು. ಇ-ಕಚೇರಿ ವ್ಯವಸ್ಥೆ ಜಾರಿಯಾಗುತ್ತಿದ್ದಂತೆ ಮಧ್ಯವರ್ತಿಗಳೕಗೆ ಬ್ರೇಕ್ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ಮುಂದೆ ಕಡತಗಳು ಮಾಯವಾಗಿ ಎಲ್ಲಾರು ಕಂಪ್ಯೂಟರ್ ಮೂಲಕ ಎಂಟ್ರಿಯಾಗಲಿದೆ.
ಒಟ್ಟಿನಲ್ಲಿ ಬೆಂಗಳೂರು ನಗರಕ್ಕೆ ಡಿಸಿಯಾಗಿ ಯಾರೇ ಬಂದ್ರೂ ಬ್ರೋಕರ್ ಗಳ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಭ್ರಷ್ಟ ವ್ಯವಸ್ಥೆ ತೊಲಗಿಸಬೇಕು ಅಂತ ಫೇಪರ್ ಲೆಸ್ ಮಾಡಲಾಗಿದೆ.ಇದರಿಂದ ನಗರ ಜಿಲ್ಲಾಡಳಿತ ಕಂಪ್ಲೀಟ್ ಆಡಳಿತ ಇ-ಕಚೇರಿಯಾಗಿ ಪರಿವರ್ತನೆಯಾಗಲಿದೆ.ಇದರಿಂದ ಇನ್ಮುಂದೆ ಆದರು ಕಂದಾಯ ಇಲಾಖೆ , ಭ್ರಷ್ಟ ಮುಕ್ತ ಜಿಲ್ಲಾಡಳಿತ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ