ಮಂಗಳೂರು:- ಮಂಗಳೂರಿನ ಟ್ಯಾಂಕರ್ ಯಾರ್ಡ್ ಒಂದರಲ್ಲಿ ಭಾರೀ ಅಕ್ರಮದ ವಾಸನೆ ಸುಳಿದಾಡಿದ್ದು, ಲಕ್ಷಗಟ್ಟಲೇ ಮೌಲ್ಯದ ಡೀಸೆಲ್ ಕಳ್ಳತನವಾಗಿದೆ.
ಆಘಾತಕಾರಿ ಘಟನೆ: ಸಿಲಿಕಾನ್ ಸಿಟಿಯಲ್ಲಿ ನಡೀತಾ ಇದ್ಯಾ ಹದಿಹರೆಯದವರ ಡ್ರಗ್ ಪಾರ್ಟಿ!?
ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದ ಬಾಳ ಗ್ರಾಮದ ಟ್ಯಾಂಕರ್ ಯಾರ್ಡ್ನಲ್ಲಿ ಡೀಸೆಲ್ ಲೋಡ್ ಮಾಡುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಟ್ಯಾಂಕರ್ ಚಾಲಕರು ಡೀಸೆಲ್ ಕಳ್ಳತನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮಾಲೀಕರು ಸಾಥ್ ನೀಡಿದ್ದಾರೆ ಎಂಬ ಗುಮಾನಿ ಎದ್ದಿದೆ.
ಮಂಗಳೂರಿನಿಂದ ಟ್ಯಾಂಕರ್ಗಳಲ್ಲಿ ಡೀಸೆಲ್ ಲೋಡ್ ಮಾಡಿ ಕೇರಳ, ತಮಿಳುನಾಡು ಸೇರಿದಂತೆ ರಾಜ್ಯ, ಹೊರರಾಜ್ಯಗಳಿಗೆ ಡೀಸೆಲ್ ರಫ್ತು ಮಾಡಲಾಗುತ್ತದೆ. ಕಡಿಮೆ ತಾಪಮಾನದಲ್ಲಿ ಜಿಗುಟಾಗಿ ಇರುವ ಡೀಸೆಲ್ ಕಡಿಮೆ ಪ್ರಮಾಣದಲ್ಲಿರುವಂತೆ ಕಂಡರೆ ಹೆಚ್ಚು ತಾಪಮಾನಗಳಿರುವ ರಾಜ್ಯಗಳಿಗೆ ಹೋದಾಗ ಜಿಗುಟಾದ ಡೀಸೆಲ್ ಕರಗಿ ದ್ರವವಾಗಿ ಮಾರ್ಪಾಡಾಗುವ ಕಾರಣ ಡೀಸೆಲ್ ಪ್ರಮಾಣ ಹೆಚ್ಚಾದಂತೆ ತೋರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಚಾಲಕರು ಲೋಡಿಂಗ್ ಸಂದರ್ಭ ಕಡಿಮೆ ತಾಪಮಾನವಿರುವಾಗ ಟ್ಯಾಂಕರ್ಗಳಿಂದ ಡೀಸೆಲ್ ಕದ್ದು ಹೆಚ್ಚು ತಾಪಮಾನ ಹೊಂದಿರುವ ರಾಜ್ಯಗಳಲ್ಲಿರುವ ಫ್ಯಾಕ್ಟರಿಗಳಿಗೆ ರಫ್ತು ಮಾಡುವಾಗ ಪಂಗನಾಮ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.