ಬೆಂಗಳೂರು:- ಇದು ಆಟೋ ಚಾಲಕರು ನೋಡಲೇಬೇಕಾದ ಸುದ್ದಿ. ನೀವು ಆಟೋ ಹಿಂದೆ ಬರೆಯುತ್ತೀರಲ್ಲಾ ಕವನ ಅದರ ಮೇಲೂ ಇರಲಿ ಸ್ವಲ್ಪ ಗಮನ. ಇಲ್ಲಾ ಪೊಲೀಸಣ್ಣ ಬರ್ತಾನೆ ನಿಮ್ಮ ಗಾಡಿ ತೆಗೆದುಕೊಂಡು ಹೋಗ್ತಾರೆ.
ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು
ಹೌದು ಮರ್ರೆ, ಆಟೋ ಅಂದಮೇಲೆ ಅಲ್ಲಿ ಡೈಲಾಗ್ ಇದ್ದೇ ಇರತ್ತೆ.. ತಮ್ಮ ಪ್ರೀತಿಯ ನಟನ ಫೋಟೋ ಹಾಕಿ ಅದರ ಕೆಳಗಡೆ ಮಾಸ್ ಡೈಲಾಗ್ ಬರೆದಿರುತ್ತಾರೆ. ಹಲವು ಮಂದಿ ಎಮೋಷನಲ್ ಪದ ಬಳಕೆ ಮಾಡಿ ಬರೆದಿದ್ರೆ, ಕೆಲವರು ತಾಯಿ ಬಗ್ಗೆ.. ಹೀಗೆ ನಾನಾ ರೀತಿಯ ಬರಹಗಳುಳ್ಳ ಪೋಸ್ಟರ್ ನೋಡಿರುತ್ತೇವೆ. ಆದ್ರೆ ಹುಷಾರ್ ಇನ್ಮುಂದೆ ಹೀಗೆಲ್ಲಾ ಹಾಕಿದ್ರೆ ದಂಡದ ಜೊತೆ ಸೀಜ್ ಆಗ್ಬಹುದು ನಿಮ್ಮ ವಾಹನ.
ಹೌದು, ವಾಹನಗಳ ಮೇಲೆ ವಿವಾದಾತ್ಮಕ, ಕ್ರೌರ್ಯ, ಅಶ್ಲೀಲ ಪೋಸ್ಟರ್ ಹಾಕಿದರೆ ಇನ್ನು ಮುಂದೆ ದಂಡ ಬೀಳಲಿದೆ. ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದು, ದಂಡದ ಜೊತೆ ಸೀಜ್ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ. ಆಟೋ, ಟ್ಯಾಕ್ಸಿ, ಇತರೆ ವಾಹನ ಚಾಲಕರ ಗಮನದಲ್ಲಿರಲಿ. ವಾಹನಗಳ ಮೇಲೆ ನೆಚ್ಚಿನ ನಟರ ಫೋಟೋ ಹಾಕಿ, ಯಾವುದೋ ವಿವಾದಾತ್ಮಕ ಫೋಟೋ ಅಥವಾ ಬರಹಗಳನ್ನು ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು ಸಮರ ಸಾರಲು ಮುಂದಾಗಿದ್ದಾರೆ.
ನಟರು ಮಚ್ಚು ಹಿಡಿಯುವ ಪೋಸ್ಟರ್ ಅಥವಾ ಕೆಲವರ ಭಾವನೆಗಳನ್ನು ಕೆರಳಿಸುವ ಬರಹಗಳು, ಫೋಟೋಗಳನ್ನು ಹಾಕಿದರೆ ಅಧಿಕಾರಿಗಳು ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ. ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ ತಂಡ ಇಂತಹ ವಾಹನಗಳ ಪರಿಶೀಲನೆಗೆ ಇಳಿಯಲಿದೆ. ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಕರು, ತಮ್ಮ ವಾಹನಗಳ ಮೇಲೆ ಯಾವುದಾದರೂ ಹಳೆಯ ಕೇಸುಗಳಿದ್ದರೆ ಅಂತ ವಾಹನಗಳನ್ನ ಅಧಿಕಾರಿಗಳು ಸೀಜ್ ಮಾಡಲಿದ್ದಾರೆ.
ಅಶ್ಲೀಲ, ಅಸಭ್ಯ ಹಾಗೂ ಕ್ರೌರ್ಯವನ್ನು ಬಿಂಬಿಸುವ ಬರಹಗಳು, ಕೆಲವು ಪೋಸ್ಟರ್ಗಳನ್ನ ಆಟೋ, ಟ್ಯಾಕ್ಸಿಗಳ ಮೇಲೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ. ಇದು ನಕಾರಾತ್ಮಕ ಪರಿಣಾಮ ಬೀಳುತ್ತಿದ್ದು ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಒಟ್ಟಾರೆ ಆಟೋ ಮೇಲಿನ ಲೈನ್ ನೋಡಿ ಎಷ್ಟೋ ಜನ ಫಿದಾ ಆಗಿದ್ದುಂಟು. ಇನ್ಮುಂದೆ ಚಾಲಕರು ಸ್ವಲ್ಪ ಎಚ್ಚರದಿಂದ ಇರಬೇಕಾಗಿದೆ.