ದೇಶಾದ್ಯಂತ ಬಿಯರ್ ಮಾರಾಟ ಗಣನೀಯ ಹೆಚ್ಚಳವಾಗಿದೆ. ಬಿಯರ್ ಟೇಸ್ಟ್ ಹೇಗಿದೆ, ಕಿಕ್ ಹೇಗಿದೆ ಅನ್ನೋದನ್ನು ಕೂಲಂಕುಷವಾಗಿ ಗಮನಿಸುತ್ತಾರೆ. ಆದರೆ ಬಿಯರ್ ಕುಡಿಯುವಾಗ ಬಿಯರ್ ಬಾಟಲ್ ಕಡು ಕಂದು ಹಾಗೂ ಗ್ರೀನ್ ಬಣ್ಣದಲ್ಲಿ ಯಾಕಿದೆ ಅನ್ನೋ ಮಾಹಿತಿ ಹಲವರಿಗೆ ಗೊತ್ತಿಲ್ಲ. ಇದರ ಹಿಂದೆ ಮಹತ್ವದ ರಹಸ್ಯವೊಂದು ಅಡಗಿದೆ.
ಚುಮು-ಚುಮು ಚಳಿ ಮಧ್ಯೆ ಬಿಯರ್ ಕುಡಿಯುವುದರಿಂದ ಸಿಗುವ ಮಜವೇ ಬೇರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಂತೂ ಭಾರತದಲ್ಲಿ ಬಿಯರ್ ಕುಡಿಯುವುದು ಜನರಿಗೆ ಟ್ರೆಂಡ್ ಆಗಿದೆ. ವಿಶೇಷವೆಣದರೆ ಬಿಯರ್ನಲ್ಲಿ ನಾನಾ ವೆರೈಟಿಗಳು ಸಹ ಇದೆ. ಪ್ರಸ್ತುತ ಭಾರತದಲ್ಲಿ 100ಕ್ಕೂ ಹೆಚ್ಚು ಬಗೆಯ ಬಿಯರ್ಗಳ ಉತ್ಪಾದನೆ ಆಗುತ್ತಿದೆ
ಆದರೆ ಈ ಬಿಯರ್ ಬಾಟಲಿಗಳು ಏಕೆ ಬೇರೆ-ಬೇರೆ ಬಣ್ಣಗಳಲ್ಲಿ ಬರುವುದಿಲ್ಲ ಅಂತ ಎಂದಾದರೂ ನೀವು ಯೋಚಿಸಿದ್ದೀರಾ? ಸಾಮಾನ್ಯವಾಗಿ ಬಿಯರ್ ಬಾಟಲಿಗಳು ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ. ಈ ಬಣ್ಣಗಳು ಸೂರ್ಯನ ಬೆಳಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಿಯರ್ ಬಾಟಲಿಗಳ ಲುಕ್ ಚೆನ್ನಾಗಿ ಕಾಣಲು ಮಾತ್ರವಲ್ಲ, ಈ ಬಣ್ಣಗಳು ಬಿಯರ್ನ ರುಚಿ ಮತ್ತು ತಾಜಾತನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
19ನೇ ಶತಮಾನದಿಂದಲೂ ಗಾಜಿನ ಬಾಟಲಿಗಳಲ್ಲಿ ಬಿಯರ್ ಅನ್ನು ತುಂಬಿಸಲಾಗುತ್ತದೆ. ಬಿಯರ್ ಅನ್ನು ತಾಜಾವಾಗಿರಿಸಲುವಲ್ಲಿ ಗ್ಲಾಸ್ ಉತ್ತಮ ವಸ್ತುವೆಂದು ಪರಿಗಣಿಸಲಾಗುತ್ತದೆ. ಹಾಗಂತ ಸರಳವಾಗಿರುವ ಗಾಜಿನ ಬಾಟಲಿಗಳಲ್ಲಿ ಬಿಯರ್ ಅನ್ನು ತುಂಬಿಸಿಡುವುದು ಸೂಕ್ತವಲ್ಲ. ಈ ರೀತಿಯ ಗಾಜಿನ ಬಾಟಲಿ ಮುಂದೆ ಬೆಳಕು ಬಿದ್ದರೆ, ಬಿಯರ್ ರುಚಿ ಮತ್ತು ವಾಸನೆಯು ಕೆಡುತ್ತದೆ. ಇದನ್ನು ‘ಲೈಟ್ಸ್ಟ್ರಕ್’ ಎಂದು ಕರೆಯಲಾಗುತ್ತದೆ, ಯುವಿ ಕಿರಣಗಳು ಬಾಟಲಿ ಮೇಲೆ ಬಿದ್ದು ಬಿಯರ್ಜೊತೆಗೆ ಪ್ರತಿಕ್ರಿಯಿಸಿದಾಗ, ವಿಶೇಷವಾಗಿ ಹಾಪ್ಸ್. ಹಾಪ್ಸ್ ಐಸೊಹ್ಮುಲೋನ್ಗಳನ್ನು ಹೊಂದಿರುತ್ತದೆ, ಇದು ಯುವಿ ಕಿರಣಗಳಿಗೆ ಒಡ್ಡಿಕೊಂಡಾಗ ವಾಸನೆಯನ್ನು ಬಿಡುಗಡೆ ಮಾಡುತ್ತದೆ.
ಹಾಗಾಗಿ ಬಿಯರ್ ಶೇಕರಿಸಿಡಲು ಗ್ರೀನ್ ಅಥವಾ ಬ್ರೌನ್ ಬಾಟಲಿಗಳು ಸುರಕ್ಷಿತವಾಗಿ ಕೆಲಸ ಮಾಡುತ್ತವೆ ಎನ್ನಲಾಗುತ್ತದೆ. ಈ ಬಾಟಲಿಗಳು ಯುವಿ ಕಿರಣಗಳನ್ನು ಬಿಯರ್ಗೆ ನುಗ್ಗದಂತೆ ತಡೆಯುತ್ತದೆ. ಅಲ್ಲದೇ ಈ ಬಣ್ಣದ ಬಾಟಲಿಗಳು ಬಿಯರ್ನಲ್ಲಿನ ಸೂಕ್ಷ್ಮ ಪದಾರ್ಥಗಳನ್ನು ರಾಸಾಯನಿಕವಾಗಿ ಪ್ರತಿಕ್ರಿಯಿಸುವುದನ್ನು ತಡೆಯುತ್ತದೆ. ಜೊತೆಗೆ ಇದು ರುಚಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಸಿರು ಮತ್ತು ಕಂದು ಬಾಟಲಿಗಳು ಬಿಯರ್ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಶುದ್ಧತೆಯನ್ನು ಕಾಪಾಡುತ್ತದೆ. ಈ ಎಲ್ಲಾ ಕಾರಣಗಳಿಂದ ಬಿಯರ್ ತಯಾರಕರು ಬೆಳಕು ಮತ್ತು ಇತರ ಪ್ರಭಾವಗಳ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಕಂದು ಬಾಟಲಿಗಳನ್ನು ಬಳಸಲಾರಂಭಿಸಿದರು.
ಎರಡನೇ ಮಹಾಯುದ್ಧದ ಸಮಯದಲ್ಲಿ, ಮಾರುಕಟ್ಟೆಯಲ್ಲಿ ಕಂದು ಗಾಜಿನ ಬಾಟಲಿಗೆ ಕೊರತೆ ಇತ್ತು. ಆ ಸಮಯದಲ್ಲಿ, ಬಿಯರ್ ತಯಾರಕರು ಹಸಿರು ಗ್ಲಾಸ್ ಬಾಟಲಿಯನ್ನು ಬಳಸಲು ಪ್ರಾರಂಭಿಸಿದರು ಮತ್ತು ಗ್ರಾಹಕರು ಈ ಬಣ್ಣದ ಬಾಟಲಿ ಬಿಯರ್ ಕುಡಿಯಲು ಉತ್ತಮ ಗುಣಮಟ್ಟದ್ದಾಗಿದೆ ಎಂದರು. ಆದರೆ, ಹಸಿರು ಬಾಟಲಿಗಳು UV ಕಿರಣಗಳಿಂದ ಕಂದು ಗಾಜಿನ ಬಾಟಲಿಯಷ್ಟು ರಕ್ಷಣೆಯನ್ನು ನೀಡುವುದಿಲ್ಲ. ಹಸಿರು ಬಾಟಲಿಗಳಲ್ಲಿ ಸಂಗ್ರಹಿಸಲಾದ ಬಿಯರ್ ‘ಲೈಟ್ಸ್ಟ್ರಕ್’ ಅಪಾಯವನ್ನುಂಟುಮಾಡುತ್ತದೆ. ಜೊತೆಗೆ ರುಚಿಯನ್ನು ಸಹ ಹಾಳುಮಾಡುತ್ತದೆ. ಹೀಗಿದ್ದರೂ, ಅನೇಕ ಬಿಯರ್ ತಯಾರಕರು ಇನ್ನೂ ಹಸಿರು ಬಾಟಲಿಗಳನ್ನು ಬಳಸುತ್ತಿದ್ದಾರೆ
ಸರಳ ಬಾಟಲಿಗಳಲ್ಲಿ ಬಿಯರ್ ಬಣ್ಣಗಳನ್ನು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಅವು ಯುವಿ ಕಿರಣಗಳಿಂದ ರಕ್ಷಿಸುವುದಿಲ್ಲ. ಆದ್ದರಿಂದ, ಬಿಯರ್ ಅನ್ನು ಸರಳ ಬಾಟಲಿಗಳಲ್ಲಿ ಸಂಗ್ರಹಿಸಿದರೆ, ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಂಡರೆ ಅದು ಬೇಗ ಹೊಡೆದು ಹೋಗಬಹುದು. ಆದರೆ, ಅನೇಕ ತಯಾರಕರು ಈಗ ಸರಳ ಬಾಟಲಿಗಳಿಗೆ UV- ರಕ್ಷಣಾತ್ಮಕ ಲೇಪನವನ್ನು ಅಂಟಿಸುತ್ತಿದ್ದಾರೆ, ಇದು ಪ್ಯಾಕೇಜಿಂಗ್ಗೆ ಸಂಬಂಧಿಸಿದ ಅಪಾಯಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಉತ್ಪನ್ನದ ಸ್ಪಷ್ಟ ನೋಟವನ್ನು ಗ್ರಾಹಕರಿಗೆ ಒದಗಿಸುತ್ತದೆ.
ಸಾಂಪ್ರದಾಯಿಕ ಬಾಟಲಿಗಳ ಜೊತೆಗೆ, ಕ್ಯಾನ್ಗಳು ಬಿಯರ್ಗಳನ್ನು ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಕ್ಯಾನ್ಗಳು 100% UV-ರಕ್ಷಿತವಾಗಿವೆ. ಹಾಗಾಗಿ ಅದರಲ್ಲಿ ಇರಿಸಲಾಗಿರುವ ಬಿಯರ್ ತಾಜಾವಾಗಿ ಉಳಿಯುತ್ತದೆ ಮತ್ತು ಯಾವುದೇ ರೀತಿಯ ಯುವಿ ಕಿರಣಗಳಿಂದ ಪ್ರಭಾವಿತವಾಗುವುದಿಲ್ಲ. ಕ್ಯಾನ್ಗಳು ತ್ವರಿತವಾಗಿ ತಣ್ಣಗಾಗುತ್ತವೆ ಮತ್ತು ಹೊರಗೆ ಪಾರ್ಟಿ ಮಾಡುವವರಿಗೆ ಬೆಸ್ಟ್ ಎಂದೇ ಹೇಳಬಹುದು.