ನಾವು ಪ್ರತಿದಿನ ಅಡುಗೆ ಮನೆಯಲ್ಲಿ ಬಳಸುವ ಕೆಲ ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಕರಿಬೇವು. ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೇ ಪಡೆದು ಕೊಳ್ಳುತ್ತಿದ್ದೇವೆ. ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚ ಎಂದೇ ಹೇಳಬಹುದು. ಒಗ್ಗರಣೆಯಿಂದ ಹಿಡಿದು ಅನೇಕ ನಾನಾ ಆಹಾರಗಳನ್ನು ತಯಾರಿಸಲು ಕರಿಬೇವನ್ನು ಬಳಸುತ್ತೇವೆ.
ಇನ್ನೂ ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ, ರೋಗಿಯು ಹೆಚ್ಚಿನ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಮಸುಕಾದ ದೃಷ್ಟಿ, ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ನಿಧಾನವಾಗಿ ಗಾಯ ಗುಣವಾಗುವುದು ಇತ್ಯಾದಿ ಲಕ್ಷಣಗಳನ್ನು ಅನುಭವಿಸಬಹುದು.
ಮಧುಮೇಹವನ್ನು ನಿಯಂತ್ರಿಸದಿದ್ದರೆ, ಮೂತ್ರಪಿಂಡ ಸೇರಿದಂತೆ ದೇಹದ ಅನೇಕ ಅಂಗಗಳಿಗೆ ಹಾನಿಯಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಅವಶ್ಯಕವಾದರೂ ಸಕ್ಕರೆ ರೋಗಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಳಸುವ ಹಲವಾರು ಔಷಧಿಗಳಿವೆ.
ನೀವು ಕಹಿ ಮಧುಮೇಹ ಔಷಧಿಗಳನ್ನು ತಪ್ಪಿಸಲು ಬಯಸಿದರೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ನೀವು ಕರಿಬೇವಿನ ಎಲೆಗಳನ್ನು ಬಳಸಬಹುದು. NCBI ನಲ್ಲಿ ಪ್ರಕಟವಾದ ಅಧ್ಯಯನವು ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.
ಕರಿಬೇವಿನ ಎಲೆಗಳು ಕೊತ್ತಂಬರಿ ಮತ್ತು ಪುದೀನ ಎಲೆಗಳಂತೆ ಸುಗಂಧಭರಿತ ಮಸಾಲೆಗಳಾಗಿವೆ. ಇವು ಆಹಾರದ ರುಚಿ ಮತ್ತು ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಕ್ಷಿಣ ಭಾರತದಲ್ಲಿ ಇವುಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಇದನ್ನು ದಾಲ್, ಸಬ್ಜಿ, ಖಿಚಡಿ, ಪೋಹಾ, ಇಡ್ಲಿ, ಸಾಂಬಾರ್ ಮುಂತಾದ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಯಾವುದೇ ನರ್ಸರಿಯಲ್ಲಿ ನೀವು ಸುಲಭವಾಗಿ ಕರಿಬೇವಿನ ಎಲೆಗಳನ್ನು ಪಡೆಯಬಹುದು.
ಕರಿಬೇವಿನ ಎಲೆಗಳು ಆಹಾರದ ರುಚಿ ಮತ್ತು ಪೋಷಣೆ ಎರಡನ್ನೂ ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯಕವಾಗಿವೆ. ನೀವು ಮಧುಮೇಹಿಗಳಾಗಿದ್ದರೆ ಪ್ರತಿದಿನ ಆಹಾರದಲ್ಲಿ ಕರಿಬೇವಿನ ಎಲೆಯನ್ನು ಬಳಸಿ.
ಇದು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದೆ.