ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಸಿ.ಟಿ. ರವಿ ಮೇಲೆ ನಕಲಿ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ? ಹೀಗೆ ಪ್ರಶ್ನೆ ಮಾಡಿದವರು ಕೇಂದ್ರ ಸಚಿವ ಪ್ರಲ್ಲಾದ ಜೋಶಿ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ಗದ್ದೆ, ಕಂಕರ್ ಮಿಷಿನ್, ಅರಣ್ಯಕ್ಕೆ ಸಿ.ಟಿ. ರವಿ ಅವರನ್ನು ಕರೆದುಕೊಂಡು ಹೋಗಿದ್ದು ಏಕೆ? ಮಾಧ್ಯಮದವರು ಬೆನ್ನು ಬಿದ್ದಿದ್ದಕ್ಕೆ ರವಿ ಉಳಿದಿದ್ದಾರೆ ಎಂದರು.
ತರಾತುರಿಯಲ್ಲಿ ರವಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಳಗಾವಿ ಪೊಲೀಸ್ ಆಯುಕ್ತರಿಗೆ ಕಾಮನ್ ಸೆನ್ಸ್ ಬೇಡ್ವಾ? ಆಯುಕ್ತರು ಅನ್ಫಿಟ್ ಇದ್ದಾರೆ. ಖಾನಾಪುರದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಜತೆಗೆ ಆಯುಕ್ತರು ಏಕೆ ಮಾತಾಡಿಲ್ಲ? ಸಾಂವಿಧಾನಿಕ ಹುದ್ದೆಯಲ್ಲಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಅವರನನು ಖಾನಾಪುರ ಠಾಣೆಗೆ ಬಿಟ್ಟಿಲ್ಲ.
ಇದು ಅತ್ಯಂತ ರಾಜಕೀಯ ದ್ವೇಷ ಎಂದು ಖಂಡಿಸಿದರು. ಛಲವಾದಿ ನಾರಾಯಣಸ್ವಾಮಿ ಹರಿಜನ ಅಂತ ಅವರ ಜತೆಗೆ ಪೊಲೀಸ್ ಆಯುಕ್ತರು ಹಾಗೇ ನಡೆದುಕೊಂಡ್ರಾ? ನಾವು ಯಾವತ್ತೂ ಅಸ್ಪಶ್ಯತೆ ಬೆಂಬಲಿಸಿಲ್ಲ. ಆದರೆ, ಬೆಳಗಾವಿ ಪೊಲೀಸರು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆ ಜನಾಂಗದವರು ಅಂತ ಆ ರೀತಿಯಲ್ಲಿ
ನಡೆದುಕೊಂಡಿರಬಹದು ಎಂದು ಕುಟುಕಿದರು.
ನಾಯಿ ಕಡಿದಿತ್ತಾ?: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಜೇಬಿನಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದರೆ ಅವರ ಉದ್ದೇಶವೇನು? ನೀವು ಬಳ್ಳಾರಿಗೆ ಹೋಗಿ ತೊಡೆ ತಟ್ಟಿದಾಗ ನಮ್ಮ ಸರ್ಕಾರ ಇತ್ತು. ಆಗ ಪೊಲೀಸರು ರಕ್ಷಣೆ ನೀಡಿದ್ದರಲ್ಲವೇ?
ಅಂಬೇಡ್ಕರ್ಗೆ ಅಪಮಾನ ಮಾಡುವಾಗ ಕಾಂಗ್ರೆಸ್ನವರಿಗೆ ಯಾವ ನಾಯಿ ಕಡಿದಿತ್ತು? ವಿವಿಧ ಸಂಧರ್ಭದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಾಗ ಏನು ನಾಯಿ ಕಡಿದಿತ್ತಾ?. ಕಾಂಗ್ರೆಸ್ನವರು ನಾಯಿ ಕಡಿದವರಂತೆ ವರ್ತನೆ ಮಾಡುತ್ತಿದ್ದಾರೆ. ಸಿ.ಟಿ. ರವಿ ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವರಿಗೆ ಏನು ಗೊತಿಲ ಹಿಂದೆ ಹೇಗೆ? ಎಂದ ಕಿಡಿಕಾರಿದರು.