ಬೆಂಗಳೂರು :- ರಾಜ್ಯದಲ್ಲಿ ಒಂದು ಕಡೆ ಸಿಎಂ ಬದಲಾವಣೆಯ ಸುದ್ದಿ ಸದ್ದು ಮಾಡುತ್ತಿದೆ.. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಯೂ ಕಾವೇರಿಸಿದೆ.. ಇದೆಲ್ಲದರ ಮಧ್ಯೆ ತೇಲಿಬಂದ ಗೃಹಸಚಿವ ಜಿ.ಪರಮೇಶ್ವರ್ ರಾಜೀನಾಮೆ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಪರಮೇಶ್ವರ್ ದಿಢೀರ್ ರಾಜಕೀಯ ಮಾತನ್ನಾಡಿರೋದು ಏಕೆ.. ಏನಿದರ ಅಸಲಿ ಮರ್ಮ.. ಅದನ್ನು ನೋಡೋಣ.
ಅಂತಿಮ ಘಟ್ಟ ತಲುಪಿದ ‘ಮಹಾಕುಂಭಮೇಳ’: ವಿಶೇಷಗಳ ಜೊತೆ ಅನಾಹುತಗಳು ಸಾಕಷ್ಟು!
ಎಸ್.. ರಾಜ್ಯ ಕಾಂಗ್ರೆಸ್ನಲ್ಲಿ ಪಟ್ಟಕ್ಕಾಗಿ ಫೈಟ್ ನಡೀತಿದೆ.. ಒಂದು ಕಡೆ ಸಿಎಂ ಕುರ್ಚಿ.. ಇನ್ನೊಂದ್ಕಡೆ ಕೆಪಿಸಿಸಿ ಅಧ್ಯಕ್ಷ ಗಾದಿ ಎರಡು ಕುರ್ಚಿಗಳಿಗೋಸ್ಕರ ಭಾರೀ ಲಾಬಿಯೇ ನಡೀತಿದೆ.. ಒಂದು ಕಡೆ ಜಾರಕಿಹೊಳಿ ಟೀಂ ಅಧ್ಯಕ್ಷ ಗಾದಿಗೆ ಸರ್ಕಸ್ ಮಾಡ್ತಿದ್ರೆ, ಇತ್ತ ಕೆಎನ್ ರಾಜಣ್ಣ ಸಹ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಮೇಲೆ ನಾನು ಇದ್ದೀನಿ ಸ್ವಾಮಿ ಅಂತಾ ಟವಲ್ ಹಾಕಿದ್ದಾರೆ. ಇಷ್ಟು ದಿನದವರೆಗೂ ಸಿಎಂ ಕುರ್ಚಿ ಹತ್ತೋಕೆ ಬಿಗಿಪಟ್ಟು ಹಿಡಿದಿದ್ದ ಡಿಕೆಶಿವಕುಮಾರ್ ಇದೀಗ ವರಸೆ ಬದಲಾಯಿಸಿ, ನನ್ನ ನೇತೃತ್ವದಲ್ಲಿ ಮುಂದಿನ ಚುನಾವಣೆ ಅಂತೀದ್ದಾರೆ.. ಇದೆಲ್ಲಾ ಗೊಂದಲದ ನಡುವೆ ಪರಮೇಶ್ವರ್ ರಾಜೀನಾಮೆ ಮಾತುಗಳನ್ನಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ..
ಇತ್ತೀಚಿಗಷ್ಟೇ ದಲಿತ ಶಕ್ತಿ ಪ್ರದರ್ಶನಕ್ಕಾಗಿ ದೆಹಲಿಗೂ ಭೇಟಿ ನೀಡಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದರು ಪರಮೇಶ್ವರ್.. ಈ ವೇಳೆ ದಲಿತ ನಾಯಕರನ್ನೇ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆಯೂ ಬೇಡಿಕೆ ಇಟ್ಟಿದ್ದಾರೆ ಅನ್ನೋ ಮಾತುಗಳಿವೆ. ಇದೆಲ್ಲಾ ಬೆಳವಣಿಗೆಗಳ ನಡುವೆ ಪರಮೇಶ್ವರ್ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಜಿ.ಪರಮೇಶ್ವರ್ ಅವರ ಮಾತು ಅಚ್ಚರಿಯ ಮಾತು ಕೇಳಿಬಂದಿದೆ. ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಆಗದಕ್ಕೆ ಬೇಸರ ಹೊರ ಹಾಕಿದ ಹೋಂ ಮಿನಿಸ್ಟರ್ ಜಿ.ಪರಮೇಶ್ವರ್ ರಾಜೀನಾಮೆಯ ಮಾತುಗಳನ್ನಾಡಿದ್ದಾರೆ.
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ. ನಿಮ್ಮ ಮನಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಕರ್ತ ಕ್ಷಮೆ ಕೇಳಿದ ಪರಮೇಶ್ವರ್ , ನೀವು ಹೇಳಿದರೆ ಗೃಹ ಸಚಿವ ಸ್ಥಾನ ರಾಜೀನಾಮೆ ನೀಡಲು ಸಿದ್ದ ಎಂದಿದ್ದಾರೆ. ಪರಮೇಶ್ವರ್ ಅವರ ಈ ಹೇಳಿಕೆಯಿಂದ ವಿಚಲಿತರಾದ ಕಾರ್ಯಕರ್ತರು ಹಾಗೂ ಮುಖಂಡರು, ತಕ್ಷಣ ರಾಜೀನಾಮೆ ಕೊಡಬೇಡಿ ಅಂತಾ ಕೂಗಿದ್ದಾರೆ. ಸದ್ಯ ಪರಮೇಶ್ವರ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.