ಪಾರು ಧಾರವಾಹಿ ಖ್ಯಾತಿಯ ಮೋಕ್ಷಿತಾ ಪೈ ಸದ್ಯ ಬಿಗ್ ಬಾಸ್ ನಲ್ಲಿ ಮಿಂಚುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿರುವ ಮೋಕ್ಷಿತಾ ಪೈ ಬಗ್ಗೆ ಇದೀಗ ಶಾಕಿಂಗ್ ಸುದ್ದಿಯೊಂದು ಕೇಳಿ ಬಂದಿದೆ.
ಇತ್ತೀಚೆಗೆ ಬಿಗ್ ಬಾಸ್ ಮತ್ತೋರ್ವ ಸ್ಪರ್ಧಿ ಚೈತ್ರಾ ಕುಂದಾಪುರ ಕೋರ್ಟ್ ಗೆ ಹೋಗಿ ಬಂದಿದ್ದಾರೆ. ಉದ್ಯಮಿಯೊಬ್ಬರಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ವಿಚಾರಣೆಗೆ ಹಾಜರಾಗಿದ್ದರು.
ಆದರೆ ಇದಕ್ಕಿಂತ ಮತ್ತೊಂದು ಶಾಕಿಂಗ್ ನ್ಯೂಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮತ್ತೊರ್ವ ಸ್ಫರ್ಧಿ 20ನೇ ವಯಸ್ಸಿನಲ್ಲಿ ಜೈಲಿಗೆ ಹೋಗಿ ಬಂದಿದ್ದರು ಅಂತ ಹೇಳಲಾಗ್ತಿದೆ.
ಬಿಗ್ ಬಾಸ್ ಮನೆಯ ಚೆಲುವೆ ಮೋಕ್ಷಿತಾ ಪೈ ತಮ್ಮ 20ನೇ ವಯಸ್ಸಿನಲ್ಲಿ ಬಾಯ್ ಫ್ರೆಂಡ್ ಜೊತೆ ಸೇರಿ ಕಿಡ್ನಾಪ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದರು ಅಂತ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ಮೋಕ್ಷಿತಾ ಪೈ ಅವರು 20 ನೇ ವಯಸ್ಸಿನಲ್ಲೇ ಜೈಲಿಗೆ ಹೋಗಿದ್ದರಂತೆ. ಇವರ ನಿಜವಾದ ಹೆಸರು ಕೂಡ ಅದಲ್ವಂತೆ. ಐಶ್ವರ್ಯ ಪೈ ಅನ್ನೋದು ಮೋಕ್ಷಿತಾ ಪೈ ಅವರ ನಿಜವಾದ ಹೆಸರಂತೆ. ಈ ಹಿಂದೆ ಮೋಕ್ಷಿತಾ ಫೈ ಟ್ಯೂಶನ್ ಹೇಳಿಕೊಡುತ್ತಿದ್ದರಂತೆ.
ಟ್ಯೂಷನ್ ತೆಗೆದುಕೊಳ್ಳೋಕೆ ಮೋಕ್ಷಿತಾ ಅವರ ಮನೆಗೆ ಸಾಕಷ್ಟು ಮಕ್ಕಳು ಕೂಡ ಬರುತ್ತಿದ್ದರಂತೆ. 2014ರಲ್ಲಿ ಮಗುವೊಂದನ್ನು ಕಿಡ್ನಾಪ್ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ಮೋಕ್ಷಿತಾ ಹಾಗೂ ಆಕೆಯ ಗೆಳೆಯ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದರಂತೆ.
ಮೋಕ್ಷಿತಾ ಪೈ ಹಾಗೂ ಸ್ನೇಹಿತ ನಾಗಭೂಷಣ್ ಇಬ್ಬರು ಸೇರಿ 14 ವರ್ಷದ ಬಾಲಕಿ ಪವಿತ್ರಾ ಅವರನ್ನು ಕಿಡ್ನಾಪ್ ಮಾಡಿದ್ದರಂತೆ. ಬಾಲಕಿ ತಂದೆ ಹೋಟೆಲ್ ಉದ್ಯಮಿಯಾಗಿದ್ದರಿಂದ ಈ ಬಾಲಕಿಯನ್ನೇ ಟಾರ್ಗೆಟ್ ಮಾಡಿದ್ದರಂತೆ.
ನಾಗಭೂಷಣ್ ಎಲ್ಲಾ ಮಾಹಿತಿಯನ್ನು ಮೋಕ್ಷಿತಾ ಪೈಗೆ ಮೆಸೇಜ್ ಮಾಡಿದ್ದರಂತೆ. ಇದರ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರಂತೆ. ಜೈಲಿನಿಂದ ಬಳಿಕ ಐಶ್ವರ್ಯ ಪೈ ಹೆಸರನ್ನು ಮೋಕ್ಷಿತಾ ಪೈ ಅಂತ ಬದಲಾಯಿಸಿಕೊಂಡಿದ್ದರು ಅಂತ ಹೇಳಲಾಗ್ತಿದೆ. ಇನ್ನೂ ಈ ಘಟನೆ ನಡೆದಾಗ ಡೆಕ್ಕನ್ ಹೆರಾಲ್ಡ್ ಈ ಬಗ್ಗೆ ಸಂಕ್ಷಿಪ್ತ ವರದಿ ಮಾಡಿದೆ.