2025ರ ಐಪಿಎಲ್ನಲ್ಲಿ ಆರ್ಸಿಬಿ ಮುನ್ನಡೆಸೋರು ಯಾರೂ ಅನ್ನೋ ಕುತೂಹಲಕ್ಕೆ ತೆರೆ ಬಿದಿದ್ದು, ಕೊಹ್ಲಿ ಶಿಷ್ಯನ ರಜತ್ ಪಟೀದಾರ್ ಆರ್ಸಿಬಿ ಮುನ್ನಡೆಸೋ ಜವಾಬ್ದಾರಿ ಕೊಟ್ಟಿದೆ. ಆದರೆ ಮೊದ್ಲಿನಿಂದಲೂ ಈ ಬಾರಿ ಕೂಡ ವಿರಾಟ್ ಕೊಹ್ಲಿನೇ ಕ್ಯಾಪ್ಟನ್ ಆಗ್ಬಬಹುದು ಅಂತಾ ಅಂದುಕೊಂಡಿದ್ರು. ಆದ್ರೆ ಇದೀಗ ರಜತ್ ಪಟೀದಾರ್ ಕ್ಯಾಪ್ಟನ್ ಆಗಿದ್ದು, ವಿರಾಟ್ ಕೊಹ್ಲಿಯನ್ನು ಯಾಕೆ ಆಯ್ಕೆ ಮಾಡಿಲ್ಲ ಅನ್ನೋದಕ್ಕೆ ಆರ್ಸಿಬಿ ಸ್ಪಷ್ಟನೆ ಕೊಟ್ಟಿದೆ…
ಅಧಿಕಾರಿಗೆ ನಿಂದನೆ ಪ್ರಕರಣ ; ಶಾಸಕ ಸಂಗಮೇಶ್, ಪುತ್ರನ ವಿರುದ್ದ ನಿಖಿಲ್ ಕುಮಾರಸ್ವಾಮಿ ಕಿಡಿ
ಹೌದು, ವಿರಾಟ್ ಕೊಹ್ಲಿಗೆ ಆರ್ಸಿಬಿ ಕ್ಯಾಪ್ಟನ್ ಶಿಪ್ ಕೊಡದೇ ಅವರ ಶಿಷ್ಯನಿಗೆ ಕೊಟ್ಟಿದ್ದು, ಹಲವು ಪ್ರಶ್ನೆಗಳ ಸೃಷ್ಟಿಸಿತ್ತು. ಇದಕ್ಕೆ ಆರ್ಸಿಬಿ ವ್ಯವಹಾರಗಳ ನಿರ್ದೇಶಕ ಮೊ ಬೊಬಾಟ್ ಉತ್ತರಿಸಿದ್ದಾರೆ. ‘ಭಾರತದ ಆಟಗಾರರನ್ನು ನಾಯಕನನ್ನಾಗಿ ಮಾಡಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಇದು ಭಾರತೀಯ ಲೀಗ್ ಆಗಿರುವುದರಿಂದ, ಸ್ಥಳೀಯ ವಿಚಾರಗಳ ಬಗ್ಗೆ ಹೆಚ್ಚು ಮಾಹಿತಿ ಇರುವ ಭಾರತೀಯ ಆಟಗಾರನಿಗೆ ನಾವು ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಿದ್ದೆವು. ವಿರಾಟ್ ಅವರ ಹೆಸರೂ ಲಿಸ್ಟ್ನಲ್ಲಿ ಇತ್ತು. ರಜತ್ ಅವರ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಅವರು ಹಿಂದಿನ ಸೀಸನ್ನಲ್ಲಿ ಉತ್ತಮವಾಗಿ ಆಡಿದ್ದಾರೆ. ಹೀಗಾಗಿ ಅವರನ್ನ ಆಯ್ಕೆ ಮಾಡಲಾಗಿದೆ. ಎಂದಿದ್ದಾರೆ.
ಇನ್ನೂ ವಿರಾಟ್ ಅವರಿಗೆ ತಂಡವನ್ನು ಮುನ್ನಡೆಸಲು ನಾಯಕತ್ವವೇ ಬೇಕಾಗಿಲ್ಲ. ಕಳೆದ ಬಾರಿ ಫಾಪ್ ಡುಪ್ಲೆಸಿಸ್ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಕೊಹ್ಲಿ ಹಿಂದಿನಿಂದ ತಂಡವನ್ನು ಮುನ್ನಡೆಸುತ್ತಿದ್ದರು.
ಕ್ಯಾಪ್ಟನ್ ಆಗಿರಲಿ ಬಿಡ್ಲಿ ಕೊಹ್ಲಿ ಯಾವಾಗಲೂ ತಂಡದ ನಾಯಕನಾಗಿರುತ್ತಾರೆ ಎಂದಿದ್ದಾರೆ…
ಇದಲ್ಲದೇ ಆರ್ಸಿಬಿ ಹಾಕಿಕೊಂಡಿರೋ ಪೋಸ್ಟ್ ಕೂಡ ಕೊಹ್ಲಿಯೇ ಆರ್ಸಿಬಿ ಸಾರಥಿ ಅಂತಾ ಹೇಳ್ತಿದೆ.. ಮಹಾಭಾರತದ ಹೋಲಿಕೆ ಮಾಡಿ ಫೋಸ್ಟ್ ಹಾಕಿದ್ದು, ಕೊಹ್ಲಿ ಶ್ರೀಕೃಷ್ಣನಂತೆ ಮುಂದಿದ್ದರೆ, ರಜತ್ ಅರ್ಜುನ್ ರೀತಿ ಎಂದಿದ್ದಾರೆ. ಹಾಗಾದ್ರೆ ಐಪಿಎಲ್ ಅನ್ನೋ ಯುದ್ದದಲ್ಲಿ ಗೆಲುವು ಆರ್ಸಿಬಿ ಪಾಲಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ ಅಷ್ಟೇ..