ಈ ವಾರ ಬಿಗ್ ಬಾಸ್ ಮನೆಯೊಳಗೆ (Bigg Boss Kannada 10) ಅಚ್ಚರಿಯೊಂದು ನಡೆದಿದೆ. ಸತತ ಹತ್ತು ವರ್ಷಗಳಿಂದ ಬಿಗ್ ಬಾಸ್ ಕನ್ನಡ ಶೋ ಅನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರೋ ಸುದೀಪ್, ಇದೇ ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದು ಕನ್ನಡದ ಮೇಲಿನ ತಮ್ಮ ಅಭಿಮಾನಕ್ಕೆ ಎನ್ನುವುದು ಇನ್ನೂ ವಿಶೇಷ.
ಪ್ರತಿ ವಾರದಂತೆ ಈ ವಾರವೂ ದೊಡ್ಮನೆಯಿಂದ ಒಬ್ಬರು ಎಲಿಮಿನೇಟ್ ಆಗಬೇಕಿತ್ತು. ನಂಬಲರ್ಹ ಮೂಲಗಳ ಪ್ರಕಾರ, ಎಲಿಮಿನೇಷನ್ ತೂಗುಕತ್ತಿಯು ಈ ವಾರ ಸ್ನೇಹಿತ್ ಮತ್ತು ಮೈಕಲ್ ಮೇಲೆ ತೂಗುತ್ತಿತ್ತು. ಎಲ್ಲರ ಲೆಕ್ಕಾಚಾರ ಪ್ರಕಾರ ಈ ವಾರ ಸ್ನೇಹಿತ್ (Snehith Gowda) ಬಿಗ್ ಬಾಸ್ ಮನೆಯಿಂದ ಆಚೆ ಬರ್ತಾರೆ ಎಂದೇ ನಂಬಲಾಗಿತ್ತು. ಆದರೆ, ಸ್ನೇಹಿತ್ ಎಲಿಮಿನೇಷನ್ನಿಂದ ಬಚಾವ್ ಆಗಿದ್ದಾರೆ ಎನ್ನಲಾಗಿತ್ತಿದೆ.
ಸ್ನೇಹಿತ್ ಬಚಾವ್ ಆಗಿದ್ದರಿಂದ ಮೈಕಲ್ ಮನೆಯಿಂದ ಆಚೆ ಬರೋದು ಅನಿವಾರ್ಯವಾಗಿತ್ತು ಈ ಸಮಯದಲ್ಲಿ ಸುದೀಪ್ ತಮ್ಮ. ವಿಶೇಷ ಅಧಿಕಾರ ಬಳಸಿದ್ದಾರೆ ಎನ್ನುವ ಮಾಹಿತಿ ತೇಲಿ ಬಂದಿದೆ. ಈ ವಿಶೇಷ ಅಧಿಕಾರದಡಿ ಸುದೀಪ್ ಅವರು, ಒಬ್ಬರನ್ನು ನೇರವಾಗಿ ಎಲಿಮಿನೇಟ್ ಮಾಡಬಹುದು ಅಥವಾ ಎಲಿಮಿನೇಟ್ ಆದವರನ್ನು ಬಚಾವ್ ಮಾಡಬಹುದಂತೆ. ಈ ಅಧಿಕಾರ ಬಳಸಿಕೊಂಡು ಮೈಕಲ್ ಅವರನ್ನು ಮನೆಯಲ್ಲೇ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸುದೀಪ್ ಇಂಥದ್ದೊಂದು ವಿಶೇಷ ಅಧಿಕಾರ ಬಳಸೋಕೆ ಕಾರಣ ಕನ್ನಡದ ಮೇಲಿನ ಮೈಕಲ್ (Michael Ajay) ಬದ್ಧತೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಈ ವಾರ ಮೈಕಲ್ ಅದ್ಭುತವಾಗಿ ಕನ್ನಡವನ್ನು ಓದಿದ್ದಾರೆ. ಆದಷ್ಟು ಕನ್ನಡವನ್ನೇ ಅವರು ಬಳಸುತ್ತಾರೆ. ಈ ಕಾರಣದಿಂದಾಗಿ ಸುದೀಪ್. ಇದೇ ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರವನ್ನು ಬಳಸಿದ್ದಾರೆ ಎನ್ನಲಾಗುತ್ತಿದೆ.