ಬೆಂಗಳೂರು: ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಉತ್ತರ ಭಾರತೀಯರಿಂದಾಗಿ ಎಂಬ ಯುವತಿ ಹೇಳಿಕೆ ಭಾರೀ ವೈರಲ್ ಆಗಿದೆ.
ಸಿದ್ದರಾಮಯ್ಯಗೆ ಸಂಕಷ್ಟ: ಮಹಿಳೆ ವೇಲ್ ಎಳೆದಿದ್ದ ಕೇಸ್ ನೆನಪಿಸಿದ ಬಿಜೆಪಿ!
ನಾರ್ತ್ ಇಂಡಿಯನ್ ಯುವತಿ ಬಳಿ ಯುವಕನೊಬ್ಬ ಮೈಕ್ ಹಿಡಿದು ಬೆಂಗಳೂರಿನಲ್ಲಿ ನಿಮಗೆ ಶಾಕಿಂಗ್ ಅನಿಸಿದ ಕಲ್ಚರ್ ಯಾವುದು ಎಂಬ ಪ್ರಶ್ನೆಯನ್ನು ಕೇಳಿದಾಗ, ಇದಕ್ಕೆ ಬೋಲ್ಡ್ ಆಗಿ ಉತ್ತರಿಸಿದ ಆಕೆ ನನಗೆ ಇಲ್ಲಿನ ಸಂಸ್ಕೃತಿಯ ಬಗ್ಗೆ ಏನು ಶಾಕ್ ಆಗಿಲ್ಲ, ಇಲ್ಲಿನ ಜನ ಮಾತ್ರ ಸುಮ್ಮಸುಮ್ಮನೇ ಉತ್ತರ ಭಾರತೀಯರನ್ನು ದ್ವೇಷ ಮಾಡ್ತಾರೆ, ಆದ್ರೆ ಬೆಂಗಳೂರು ಈ ಮಟ್ಟಿಗೆ ಬೆಳೆದಿದ್ದೇ ಉತ್ತರ ಭಾರತೀಯರು ಇಲ್ಲಿಗೆ ಬಂದಿರುವುದರಿಂದ, ಹೆಚ್ಚಿನವರು ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾಳೆ. ಕೆಲವರು
ಈಕೆಯ ಹೇಳಿಕೆಯನ್ನು ವಿರೋಧಿಸಿದರೆ, ಇನ್ನೂ ಕೆಲವರು ಆಕೆ ಸತ್ಯವನ್ನೇ ಹೇಳಿದ್ದಾಳೆ ಎಂದು ಯುವತಿಯ ಪರ ಬ್ಯಾಟಿಂಗ್ ಬೀಸಿದ್ದಾರೆ.
ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬೆಂಗಳೂರು ಇದು ಈ ಮಟ್ಟಿಗೆ ಇದೆ ಎಂದ್ರೆ ಅದಕ್ಕೆ ಉತ್ತರ ಭಾರತೀಯರೇ ಕಾರಣ ಎಂದು ಹೇಳಿದ್ದಾಳೆ. ಯುವಕನೊಬ್ಬ ಬೆಂಗಳೂರಿನ ಸಂಸ್ಕೃತಿಯ ಬಗ್ಗೆ ಪ್ರಶ್ನೆ ಕೇಳಿದಾಗ ಆಕೆ, ಇಲ್ಲಿನ ಸಂಸ್ಕೃತಿಯ ಬಗ್ಗೆ ಏನು ಶಾಕ್ ಆಗಿಲ್ಲ, ಆದ್ರೆ ಇಲ್ಲಿನ ಜನ ಸುಮ್ಮಸುಮ್ಮನೇ ಉತ್ತರ ಭಾರತೀಯರನ್ನು ದ್ವೇಷ ಮಾಡ್ತಾರೆ. ನಾವು ಉತ್ತರದವರು ಎಂದು ತಿಳಿದಾಗ ವಿಭಿನ್ನವಾಗಿ ವರ್ತಿಸ್ತಾರೆ, ಅದರಲ್ಲೂ ಆಟೋ ಚಾಲಕರು ತುಸು ಹೆಚ್ಚೇ ಆಟೋ ಬಾಡಿಗೆಯನ್ನು ನಮ್ಮಿಂದ ವಸೂಲಿ ಮಾಡ್ತಾರೆ. ಮತ್ತು ನಮ್ಮನ್ನು ಹಿಂದಿವಾಲಾಗಳು ಅಂತ ಕರಿತಾರೆ. ಹೀಗಿದ್ದರೂ ಈ ನಗರ ನನಗೆ ತುಂಬಾನೇ ಇಷ್ಟ. ಆದ್ರೆ ಇಲ್ಲಿನ ಜನ ಮಾತ್ರ ನಮ್ಮ ಜೊತೆ ವಿಚಿತ್ರವಾಗಿ ವರ್ತಿಸ್ತಾರೆ. ಆದರೆ ವಾಸ್ತವ ಏನಂದ್ರೆ ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಮಾತ್ರ ಉತ್ತರ ಭಾರತೀಯರಿಂದಲೇ. ಈ ವಾಸ್ತವವನ್ನು ಒಪ್ಪಿಕೊಳ್ಳಲು ಇಲ್ಲಿನ ಜನ ತಯಾರಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾಳೆ.