ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಅದರಲ್ಲೂ ನೆಪೋ ಕಿಡ್ ಗಳನ್ನ ಕಂಡರೆ ಕಂಗನಾ ಉರಿದುರಿದು ಬೀಳುತ್ತಾರೆ. ಸದ್ಯ ಕಂಗನಾರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಆಲಿಯಾ ಭಟ್ ನ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿ ಈ ಟೀಕೆ ನಡೆದಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಆಲಿಯಾ ಭಟ್ ಅವರು ಸ್ಟಾರ್ ಕಿಡ್ ಆದರೂ ಚಿತ್ರರಂಗದಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯನ್ನು ಕಂಗನಾ ಲಾಭಿ ಮಾಡಿ ಪಡೆದಿದ್ದಾರೆ ಎಂದು ಕಂಗನಾ ರಣಾವತ್ ಅವರು ಪರೋಕ್ಷವಾಗಿ ಆರೋಪಿಸಿದ್ದಾರೆ.
ಕಂಗನಾ ರಣಾವತ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿಯಿಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಯಾವ ರೀತಿಯಲ್ಲಿ ನೋಡುತ್ತೀರಿ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಕಂಗನಾ ಉತ್ತರಿಸಿದ್ದಾರೆ. ‘ನಾನು ಅವರನ್ನು ಇಂಡಸ್ಟ್ರಿಯ ಸ್ಟಾರ್ ಕಿಡ್ ರೀತಿಯೇ ನೋಡುತ್ತೇನೆ. ಕಂಗನಾಗೆ ಎಲ್ಲಾ ಅವಾರ್ಡ್ ಸಿಕ್ಕಿದೆ ನನಗೂ ಬೇಕು ಎಂದು ಅವರು (ಆಲಿಯಾ?) ಹಠ ಹಿಡಿದಿರುತ್ತಾರೆ. ಹೀಗಾಗಿ ಎಲ್ಲಾ ಪ್ರಶಸ್ತಿಗಳನ್ನು ಅವರಿಗೆ ಸಿಕ್ಕಿದೆ’ ಎಂದಿದ್ದಾರೆ ಕಂಗನಾ.
ರಾಜಕೀಯ ಜರ್ನಿ ಆರಂಭಿಸಿದ್ದಕ್ಕೆ ಬಾಲಿವುಡ್ನ ಯಾರಾದರೂ ವಿಶ್ ಮಾಡಿದರೇ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಬಾಲಿವುಡ್ ಮಂದಿಗೂ ನನ್ನ ಬಗ್ಗೆ ಖುಷಿ ಇದೆ. ನಾವು ರಾಷ್ಟ್ರೀಯತಾ ವಾದಿಗಳು. ನಾವು ಸಿನಿಮಾ ರಂಗದಲ್ಲಿ 10-15 ವರ್ಷ ಕಳೆದಿದ್ದೇವೆ. ನೆಪೋ ಮಾಫಿಯಾ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಲೇ ಇದೆ’ ಎಂದಿದ್ದಾರೆ ಕಂಗನಾ.