ಪ್ರತಿದಿನ ಬೆಳಿಗ್ಗೆ ನೆನೆಸಿದ ವಾಲ್ ನಟ್ಸ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ನೆನೆಸಿ ತಿನ್ನುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ದ್ವಿಗುಣಗೊಳ್ಳುತ್ತವೆ. ಪ್ರತಿದಿನ ಬೆಳಗ್ಗೆ ಇವುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿರುವ ನಾರಿನಂಶ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಹಸಿವಿನ ಸಂಕಟವನ್ನು ತಡೆಯುತ್ತದೆ. ತೂಕ ಹೆಚ್ಚಾಗುವ ಭಯವಿರುವುದಿಲ್ಲ. ಏಕೆಂದರೆ ನಾರಿನಂಶವನ್ನು ಸೇವಿಸುವುದರಿಂದ ಹೊಟ್ಟೆಯು ಹೆಚ್ಚು ಕಾಲ ತುಂಬಿದ ಅನುಭವವಾಗುತ್ತದೆ. ಅದರಲ್ಲೂ ಈ ರೀತಿ ನೆನೆಸಿದ ವಾಲ್ ನಟ್ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದಿನವಿಡೀ ಕ್ರಿಯಾಶೀಲರಾಗಿರುತ್ತೀರಿ.
PM Modi: ನನ್ನ ಭಾರತ ರಕ್ಷಿಸಲು ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವೆ – ಪ್ರಧಾನಿ ಮೋದಿ!
ನೆನೆಸಿದ ವಾಲ್ ನಟ್ಸ್ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ವಾಲ್ನಟ್ಸ್ ಅನ್ನು ಚಿಕ್ಕವರು ಅಥವಾ ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ತಿನ್ನಬಹುದು. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ಕೆಲವರಿಗೆ ಹಾರ್ಟ್ ಬ್ಲಾಕ್ ಆಗಿರುತ್ತದೆ. ವಾಲ್ ನಟ್ಸ್ ಹೃದಯದ ಬ್ಲಾಕ್ಗಳನ್ನು ಕ್ಲಿಯರ್ ಮಾಡಿ, ರಕ್ತ ಪರಿಚಲನೆ ಸುಧಾರಿಸುತ್ತದೆ.
ವಾಲ್ ನಟ್ಸ್ ಜೀರ್ಣಾಂಗ ವ್ಯವಸ್ಥೆಗೆ ವಿಶೇಷವಾಗಿ ಒಳ್ಳೆಯದು. ನಿದ್ರಾಹೀನತೆಯು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ನೀವು ನಿಮ್ಮ ಆಹಾರದಲ್ಲಿ ವಾಲ್ನಟ್ಸ್ ಅನ್ನು ಸೇವಿಸಿದರೆ ಒತ್ತಡ ಮತ್ತು ಆತಂಕವನ್ನು ತೊಡೆದುಹಾಕುತ್ತೀರಿ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ನೆನೆಸಿದ ವಾಲ್ ನಟ್ಸ್ ಸೇವಿಸಬೇಕು.
ವಾಲ್ ನಟ್ಸ್ ಫೈಬರ್, ಮೆಗ್ನೀಸಿಯಮ್, ಕಬ್ಬಿಣ ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ. ಅದರಲ್ಲಿ ಒಮೆಗಾ ಕೊಬ್ಬಿನಾಮ್ಲಗಳು ವಿಶೇಷವಾಗಿ ಹೆಚ್ಚಾಗಿರುತ್ತವೆ. ಇದಲ್ಲದೆ, ವಾಲ್ ನಟ್ಸ್ ತಾಮ್ರ ಮತ್ತು ರಂಜಕವನ್ನು ಸಹ ಹೊಂದಿರುತ್ತದೆ. ಇದೊಂದು ರೀತಿಯಲ್ಲಿ ಪೋಷಕಾಂಶಗಳ ಗಣಿ ಎಂದೇ ಹೇಳಬೇಕು. ಮಧುಮೇಹದಿಂದ ಬಳಲುತ್ತಿರುವವರು ವಾಲ್ ನಟ್ಸ್ ತಿನ್ನುವುದು ತುಂಬಾ ಪ್ರಯೋಜನಕಾರಿ. ಇದು ಶುಗರ್ ಕಂಟ್ರೋಲ್ ಮಾಡುತ್ತದೆ.