ಬೆಂಗಳೂರು/ನವದೆಹಲಿ:- ಎಲ್ಲರಿಗೂ ಗೊತ್ತಿರುವ ಹಾಗೆ ಮಧುಮೇಹ ಸತತವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದ್ದು, ಲಕ್ಷಾಂತರ ಜನರು ದಿನನಿತ್ಯ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಮಧುಮೇಹ ನಿಯಂತ್ರಣಕ್ಕೆ ಬಳಕೆಯಾಗುವ ಔಷಧಿಗಳ ಬೆಲೆ ಹೆಚ್ಚು ಇರುವುದರಿಂದ ಬಹುತೇಕ ರೋಗಿಗಳು ಈ ಚಿಕಿತ್ಸೆಯನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರು, ಇಂತಹ ಸಂದರ್ಭಗಳಲ್ಲಿ ಮಧುಮೇಹಿಗಳಿಗೆ ಇದೀಗ ದೊಡ್ಡ ಸಿಹಿಸುದ್ದಿಯೊಂದು ಕೇಳಿಬಂದಿದೆ.
Yuzvendra Chahal: ಹೊಸ ಗೆಳತಿ ಜೊತೆ ಕಾಣಿಸಿಕೊಂಡ ಚಹಾಲ್! ಧನಶ್ರೀ ವರ್ಮಾ ಹೇಳಿದ್ದೇನು ಗೊತ್ತಾ..?
ಹೌದು, ಮರ್ರೆ, ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಪ್ರತಿಯೊಬ್ಬರ ಮನೆಯಲ್ಲಿ ಒಬ್ಬರಾದರೂ ಡಯಾಬಿಟಿಸ್ ಪೇಶೆಂಟ್ ಇದ್ದೇ ಇರುತ್ತಾರೆ. ಅಲ್ಲದೇ ಇವರು ಮಾತ್ರೆಗಳಿಗೆ ಹೆಚ್ಚು ಇನ್ವೆಸ್ಟ್ ಮಾಡುತ್ತಾ, ಅಲ್ಲದೇ ತಿನ್ನುವ ಆಹಾರದಲ್ಲಿ ಕಟ್ಟುನಿಟ್ಟಿನ ರೂಲ್ಸ್ ಫಾಲೋ ಮಾಡುತ್ತಾ ನರಕಯಾತನೆ ಅನುಭವಿಸುತ್ತಾರೆ.
ಇಂತಹ ಮಧುಮೇಹಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಔಷಧ ಬೆಲೆ ಶೇ.90 ಇಳಿಕೆ ಮಾಡಲಾಗಿದೆ. ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತವಾಗಿದೆ.
ಹೌದು, ಪೇಟೆಂಟ್ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಮಧುಮೇಹ ಔಷಧ ಎಂಪಾಗ್ಲಿಫ್ಲೋಜಿನ್ನ ಬೆಲೆ 90% ರಷ್ಟು ಕುಸಿದಿದೆ. ಮ್ಯಾನ್ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವಂತೆ ಮಾಡಿದೆ.
ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಭಾರತದ ನಾಲ್ಕನೇ ಅತಿದೊಡ್ಡ ಕಂಪನಿಯಾದ ಮ್ಯಾನ್ಕೈಂಡ್ ಫಾರ್ಮಾ, 10 ಮಿಗ್ರಾಂ ಟ್ಯಾಬ್ಲೆಟ್ಗೆ 5.49 ರೂ. ಮತ್ತು 25 ಮಿಗ್ರಾಂ ಟ್ಯಾಬ್ಲೆಟ್ಗೆ 9.9 ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಇದು 90% ಕ್ಕಿಂತ ಹೆಚ್ಚು ಅಗ್ಗವಾಗಿದೆ.
ಎಂಪಾಗ್ಲಿಫ್ಲೋಜಿನ್ನ ಬೆಲೆ ಈ ಹಿಂದೆ 10 ಮಿಗ್ರಾಂ ಡೋಸೇಜ್ ರೂಪದ ಟ್ಯಾಬ್ಲೆಟ್ಗೆ 58.7 ರೂ. ಮತ್ತು 25 ಮಿಗ್ರಾಂಗೆ 71.1 ರೂ. ಇತ್ತು.