ತೊಂಡೆಕಾಯಿ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಹೆಚ್ಚು ಪೌಷ್ಟಿಕಾಂಶ ಇರುವ ಈ ತೊಂಡೆಕಾಯಿ, ಉದ್ದನೆಯ ತರಕಾರಿ ಕುಕುರ್ಬಿಟೇಸಿ ವರ್ಗಕ್ಕೆ ಸೇರಿದ್ದು, ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಆಹಾರದಲ್ಲಿ ಈ ತೊಂಡೆಕಾಯಿ ಬಳಸುವುದರಿಂದ ಅನೇಕ ರೀತಿಯ ಉಪಯೋಗಗಳನ್ನು ಪಡೆಯಬಹುದು.
ಹೆಚ್ಚು ಪ್ರಮಾಣದ ವಿಟಮಿನ್ ಎ, ಬಿ1, ಬಿ2 ಮತ್ತು ಸಿ, ಜೊತೆಗೆ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ಹೊಂದಿದೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಸರಿಯಾದ ದೈಹಿಕ ಕಾರ್ಯಗಳನ್ನು ಖಚಿತಪಡಿಸಿಕೊಳ್ಳಲು ಈ ಪೋಷಕಾಂಶಗಳು ಅತ್ಯಗತ್ಯವಾಗುತ್ತವೆ.
ಪ್ರಸ್ತುತ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಆದರೆ ಅದನ್ನು ಪೂರ್ತಿಯಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದ್ದರಿಂದ ವಿವಿಧ ರೀತಿಯ ಆಹಾರಗಳನ್ನು ಸೇವನೆ ಮಾಡುವ ಮೂಲಕ, ನೀವು ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಾಗಿ ತೊಂಡೆಕಾಯಿಯನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ತೊಂಡೆಕಾಯಿ ರಸವನ್ನು ಸಹ ಕುಡಿಯಬಹುದು. ಅಲ್ಲದೆ ಇದರ ಎಲೆಗಳ ರಸವನ್ನು ತೆಗೆದುಕೊಂಡರೂ ಮಧುಮೇಹವನ್ನು ನಿಯಂತ್ರಿಸಬಹುದು.
ನಿಯಮಿತವಾಗಿ ತೊಂಡೆಕಾಯಿ ಸೇವನೆ ಮಾಡುವುದರಿಂದ ಇನ್ನೂ ಅನೇಕ ರೀತಿಯ ಪ್ರಯೋಜನಗಳಿವೆ. ಈ ತರಕಾರಿಯ ಎಲೆಗಳಿಂದ ಮಾಡಿದ ಕಷಾಯವನ್ನು ಕುಡಿಯುವುದರಿಂದ ಜ್ವರ, ಕಾಮಾಲೆ ಮತ್ತು ಕ್ಯಾನ್ಸರ್ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಎಲೆಗಳನ್ನು ಉಂಡೆಯನ್ನಾಗಿ ಮಾಡಿ ಬಳಸುವುದರಿಂದ ಚರ್ಮದ ಸಮಸ್ಯೆಗಳನ್ನು ಗುಣಪಡಿಸಬಹುದು. ನೀವು ಎಲೆ ಮತ್ತು ಕಾಂಡ ತೆಗೆದುಕೊಂಡು ಅದರ ಕಷಾಯವನ್ನು ಕುಡಿದರೆ, ಇದು ಕೆಮ್ಮು ಮತ್ತು ಅಸ್ತಮಾವನ್ನು ಸಹ ನಿವಾರಿಸುತ್ತದೆ. ಹೊಟ್ಟೆಯಲ್ಲಿರುವ ಹುಳುಗಳನ್ನು ಕೂಡ ಹೊರಗೆ ಹಾಕುತ್ತದೆ.