ನಟಿ ಜಯಮಲಾ ಅವರ ಮಗಳು ಸೌಂದರ್ಯ ಜಯಮಾಲ ಅವರ ಮದುವೆ ಅದ್ದೂರಿಯಾಗಿ ನಡೆದಿದೆ. ಹಲವು ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ, ಅಂತೆಯೇ ಮದುವೆಗೆ ಬಂದಿದ್ದ ನಟ ಧ್ರುವ ಸರ್ಜಾ ಅವರ ನಡೆಯೊಂದು ಅವರು ವ್ಯಕ್ತಿತ್ವ ಎಷ್ಟು ಸರಳ ಎಂಬುದನ್ನು ತೋರಿಸಿಕೊಟ್ಟಿದೆ.
ಸೌಂದರ್ಯ ದಂಪತಿಗೆ ಶುಭ ಕೋರಲು ವೇದಿಕೆಗೆ ಆಗಮಿಸುವಾಗ ಧ್ರುವ ಸರ್ಜಾ ತಲೆ ಭಾಗಿ ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ನಟನ ಸಿಂಪ್ಲಿಸಿಟಿ ಕಂಡು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.
ಸೌಂದರ್ಯ ಆರತಕ್ಷತೆ ಸಂಭ್ರಮದಲ್ಲಿ ಪತ್ನಿ ಪ್ರೇರಣಾ ಜೊತೆ ಆಗಮಿಸಿದ ಧ್ರುವ ಸರ್ಜಾ ವೇದಿಕೆಯ ಬಳಿ ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ಸ್ಟಾರ್ ನಟ ಆಗಿದ್ರೂ ಸರಳತೆ ಮೆರೆದಿರುವ ಧ್ರುವ ಸರ್ಜಾ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಧ್ರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.