ತಮ್ಮ 42ನೇ ವಯಸ್ಸಿನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಶ್ಲಾಘಿಸಿದ್ದಾರೆ ಹಾಗೂ ಇನ್ನೂ ಎರಡು ವರ್ಷಗಳ ಕಾಲ ಎಂಎಸ್ ಧೋನಿ ಐಪಿಎಲ್ ಟೂರ್ನಿಯಲ್ಲಿ ಆಡಬೇಕೆಂದು ಆಗ್ರಹಿಸಿದ್ದಾರೆ.
ವಿಶಾಖಪಟ್ಟಣಂನಲ್ಲಿ ಭಾನುವಾರ ನಡೆದಿದ್ದ 2024ರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 192 ರನ್ಗಳನ್ನು ಗುರಿ ಹಿಂಬಾಲಿಸಿದ್ದ ಸಿಎಸ್ಕೆ ಪರ ಎಂಎಸ್ ಧೋನಿ ಕೊನೆಯಲ್ಲಿ ಕೇವಲ 16 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 37 ರನ್ಗಳನ್ನು ಸಿಡಿಸಿದ್ದರು. ಇದರ ಹೊರತಾಗಿಯೂ ಸಿಎಸ್ಕೆ 20 ರನ್ಗಳಿಂದ ಡೆಲ್ಲಿ ವಿರುದ್ದ ಸೋಲು ಅನುಭವಿಸಿತ್ತು.
ಮ್ಮ ಅಧಿಕೃತ ಯಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಕೃಷ್ಣಮಾಚಾರಿ, “ಎಂಎಸ್ ಧೋನಿಯ ಆಟವನ್ನು ಹೇಗೆ ಅಭಿವ್ಯಕ್ತಗೊಳಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಎಂಎಸ್ ಧೋನಿಯ ಅಭಿಮಾನಿಯಾಗಿ, ನನಗೆ ತುಂಬಾ ಖುಷಿಯಾಗುತ್ತಿದೆ. ಎಂಥಾ ಬ್ಯಾಟಿಂಗ್! ಅದೂ 42ನೇ ವಯಸ್ಸಿನಲ್ಲಿ. ಯಾವುದೇ ತೊಂದರೆ ಇಲ್ಲದೆ ಅವರು ಚೆಂಡನ್ನು ಹೊಡೆಯುತ್ತಿದ್ದಾರೆ. ವಿಂಟೇಜ್ ಧೋನಿ! 2005ರಲ್ಲಿ ವೈಝಾಗ್ನಲ್ಲಿ ಪಾಕಿಸ್ತಾನ ವಿರುದ್ಧ ಆಕ್ರಮಣಕಾರಿ ಶತಕವನ್ನು ಸಿಡಿಸಿದ್ದರು. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಮೊದಲನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಅವರು, ಎರಡನೇ ಪಂದ್ಯದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿ ಅರ್ಧಶತಕವನ್ನು ಸಿಡಿಸಿದ್ದರು,” ಎಂದು ಹೇಳಿದ್ದಾರೆ.