ಬೆಂಗಳೂರು:-ಕಾವೇರಿ ನೀರಿನ ಕನೆಕ್ಷನ್ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಜನತೆ ಇಂತವರ ಜಾಲಕ್ಕೆ ಬೀಳಬೇಡಿ ಎಂದು ಜಲಮಂಡಳಿ ಕೋರಿದೆ.
ಆಟಗಾರರ ಕಳಪೆ ಪ್ರದರ್ಶನಕ್ಕೆ ಕುಟುಂಬ ದೂಷಿಸುವುದು ಸರಿಯಲ್ಲ: ಬಿಸಿಸಿಐ ವಿರುದ್ಧ ಕೊಹ್ಲಿ ಕಿಡಿ!
ಬೆಂಗಳೂರಿನ ಹೆಗಡೆ ನಗರ, ಥಣಿಸಂದ್ರದಲ್ಲಿ ಶಾಸಕರ ಹೆಸರಲ್ಲಿ ಜನರಿಗೆ ನಾಮ ಹಾಕಲಾಗಿದೆ. ನಾವು ಕಾವೇರಿ ನೀರಿನ ಏಜೆಂಟ್ ಗಳು ಎಂದು ಮೋಸ ಮಾಡಿದ್ದು, ನಿಮ್ಮ ಮನೆಗೆ ಕಾವೇರಿ ಕನೆಕ್ಷನ್ ಬೇಕಾದ್ರೆ ಹಣ ಕೊಡಿ ಎಂದು ₹4,000-₹20,000 ವರೆಗೆ ಸ್ಥಳೀಯ ಕಿಡಿಗೇಡಿಗಳು, ವಸೂಲಿ ಮಾಡ್ತಿದ್ದಾರೆ. ಇದನ್ನೆ ನಂಬಿ ಕೆಲವು ಜನ ದುಡ್ಡು ಕೊಟ್ಟು ಮೋಸ ಹೋಗಿದ್ದಾರೆ.
ಹೀಗಾಗಿ “ಕಾವೇರಿ ಕನೆಕ್ಷನ್ ಹೆಸರಲ್ಲಿ ಮೋಸ ಹೋಗಬೇಡಿ” ಎಂದು ಜಲಮಂಡಳಿ ಸೂಚನೆ ಕೊಟ್ಟಿದೆ. ಹಣ ವಸೂಲಿ ಮಾಡಿದ್ರೆ ಜಲಮಂಡಳಿ ಹೆಲ್ಪ್ ಲೈನ್ನಂಬರ್ 1916 ಗೆ ದೂರು ಕೊಡಿ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಒಂದು ಕಡೆ ಬಿಸಿಲು ಮತ್ತೊಂದು ಕಡೆಯಲ್ಲಿ ಜಲದಾಹ ಉಂಟಾಗಿದೆ. ನಗರದ ಪೂರ್ವ ಭಾಗದಲ್ಲಿ ಜಲಕ್ಷ್ಯಾಮ, ನೀರಿಗೆ ಹಾಹಾಕಾರ ಉಂಟಾಗಿದೆ. ಜಲಮಂಡಳಿ ಅಡಿಯಲ್ಲಿ 14 ಸಾವಿರ ಬೋರ್ ವೆಲ್ ಗಳ ಪೈಕಿ ಒಂದು ವರ್ಷದಲ್ಲಿ 6 ಸಾವಿರ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಕಾವೇರಿ ನೀರಿನ ಕನೆಕ್ಷನ್ ಇಲ್ಲದೆ ಬೋರ್ ವೆಲ್ ನೀರು ಡಿಪೆಂಡ್ಆಗಿರುವ ಕಡೆ ಜನರಿಗೆ ಸಂಕಷ್ಟ ಎದುರಾಗಿದೆ.
ಈ ಹಿನ್ನೆಲೆ ಕಾವೇರಿ ಸಂಪರ್ಕ ಪಡೆಯಲು ಜನತೆ ಮುಂದಾಗ್ತಿದ್ದಾರೆ. ಜನರ ಕಷ್ಟವನ್ನೇ ಅಡ್ ವೆಂಟೇಜ್ ಆಗಿ ತೆಗೆದುಕೊಂಡು ಕಿಡಿಗೇಡಿಗಳು ವಂಚನೆ ಎಸಗಿದ್ದಾರೆ. ಕಾವೇರಿ ನೀರಿನ ಕನೆಕ್ಷನ್ ಆಯಾ ಕ್ಷೇತ್ರಗಳ ಶಾಸಕರ ಅಂಡರ್ ಲ್ಲಿ ಬರುತ್ತೆ. ಶಾಸಕರು ನಮಗೆ ಹೇಳಿದ್ದಾರೆ, ನಾವೂ ಕಾವೇರಿ ಕನೆಕ್ಷನ್ ಮಾಡಿಕೊಡ್ತೀವಿ. ನಾವೂ ನಿಮ್ಮ ಮನೆಗೆ ಕಾವೇರಿ ಕನೆಕ್ಷನ್ ಮಾಡಿಸಿಕೊಡ್ತೀವೆಂದು ಹಣ ಪಡೆದು ದೋಖಾ ಮಾಡಿದ್ದಾರೆ. ಅತ್ತ ಕಾವೇರಿ ಕನೆಕ್ಷನ್,ನೀರು, ಹಣ ಇಲ್ಲದೆ ಜನರು ಕಂಗಾಲಾಗಿದ್ದಾರೆ.
ಜಲಮಂಡಳಿ ಅಧ್ಯಕ್ಷರು ಹೇಳಿದ್ದೇನು?
ಕಾವೇರಿ ಕನೆಕ್ಷನ್ ಬಗ್ಗೆ ನಾವೇ ಅಭಿಯಾನ ಮಾಡಿದ್ದೇವೆ. ಕಾವೇರಿ ಸಂಪರ್ಕ ಬೇಕಾದವರು ಜಲಮಂಡಳಿಗೆ ಅರ್ಜಿ ಹಾಕಬೇಕು. ಕಾವೇರಿ ಕನೆಕ್ಷನ್ ಜಲಮಂಡಳಿ ಕಡೆಯಿಂದಲೇ ಮಾಡಿಸ್ಬೇಕು. ಯಾವುದೇ ಶಾಸಕರಿಗೆ ಮಾಡಿಸುವ ಅಧಿಕಾರ ಇಲ್ಲ. ಶಾಸಕರು, ಸಚಿವರ ಹೆಸರಲ್ಲಿ ವಂಚಿಸಿದ್ರೆ ದೂರು ಕೊಡುವಂತೆ ಮನವಿ ಮಾಡಿದ್ದಾರೆ.
ಕಾವೇರಿ ಕನೆಕ್ಷನ್ ಪಡೆಯೋದ್ಹೇಗೆ?
ಕಾವೇರಿ ನೀರಿನ ಹೊಸ ಸಂಪರ್ಕಕ್ಕಾಗಿ ಯಾವುದೇ ಏಜೆನ್ಸಿಗಳನ್ನು/ಏಜೆಂಟ್ಗಳನ್ನು ನೇಮಿಸಿಲ್ಲ
ಜಲಮಂಡಳಿಯಿಂದ ಪರವಾನಗಿ ಪಡೆದಿರುವ ಪ್ಲಂಬರ್ಗಳಿದ್ದಾರೆ
ಆನ್ಲೈನ್ ಮೂಲಕವೇ ಜಲಮಂಡಳಿಗೆ ಅರ್ಜಿ ಸಲ್ಲಿಸಬೇಕು
ಹೊಸ ಸಂಪರ್ಕಕ್ಕಾಗಿ ಜಲಮಂಡಳಿಯ ಈ ಲಿಂಕ್ ಕ್ಲಿಕ್ ಮಾಡಬೇಕು https://owc.bwssb.gov.in/consumer
ಮನೆಯ ಮಾಲೀಕರು ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು
ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು
ಶುಲ್ಕ ಪಾವತಿಸಿ ಅರ್ಜಿ ಪಡೆದು,ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ
ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಅಗತ್ಯ ದಾಖಲಾತಿಗಳು
ನಿವೇಶನದ ಕ್ರಯಪತ್ರ ಖಾತಾ ಪ್ರಮಾಣ ಪತ್ರ
ಕಟ್ಟಡದ ನಕ್ಷೆ/ ಅನುಮೋದನೆಗೊಂಡಿರುವ ನಕ್ಷೆ ಮಾಲೀಕರೊಂದಿಗಿರುವ ಕಟ್ಟಡದ ಛಾಯಾಚಿತ್ರ
1200 ಚ.ಅಡಿ ಮತ್ತು ಮೇಲ್ಪಟ್ಟ ವಿಸ್ತೀರ್ಣದ ಮನೆಆಗಿದ್ದಲ್ಲಿ
ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿರುವುದಕ್ಕೆ ದಾಖಲೆ ಕೊಡಬೇಕು