ಧಾರವಾಡ: ಹಿಂದೂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಸಂಭ್ರಮ ವಿದ್ಯಾಕಾಶಿ ಧಾರವಾಡದಲ್ಲಿ ಕಳೆಗಟ್ಟಿದೆ. ಬೆಳಕಿನ ಹಬ್ಬ ಎಂದೇ ಕರೆಯಿಸಿಕೊಳ್ಳುವ ದೀಪಾವಳಿಯನ್ನು ಸಡಗರದಿಂದ ಆಚರಣೆ ಮಾಡಲು ಧಾರವಾಡಿಗರು ಸಿದ್ಧರಾಗುತ್ತಿದ್ದಾರೆ. ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ಜನತೆ ಬ್ಯೂಸಿಯಾಗಿದ್ದು,
ನಗರದ ಸುಭಾಷ್ ರೋಡ್, ಗಾಂಧಿ ಚೌಕ್ ಸೇರಿ ಬಹುತೇಕ ಕಡೆ ಮಾರುಕಟ್ಟೆಯಲ್ಲಿ ಕಣ್ಣು ಹಾಯಿಸಿದ್ದಲ್ಲೆಲ್ಲ ಜನರೇ ಕಾಣುತ್ತಿದ್ದಾರೆ. ಜೊತೆಗೆ ವ್ಯಾಪಾರಸ್ಥರು ಕಬ್ಬು ಬಾಳೆ, ಹೂ ಹಣ್ಣು ಸೇರಿದಂತೆ ಇನ್ನಿತರ ಅಲಂಕಾರಿಕ ಸಾಮಗ್ರಿಗಳನ್ನು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಇನ್ನೂ ಬೆಲೆ ಏರಿಕೆ ನಡೆವೆಯು ಜನತೆ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರೊಂದಿಗೆ ಡಿಕಾರೆ ರೋಡಿನ ಆಕಾಶ ಬುಟ್ಟಿ ಅಲಂಕಾರ ಗ್ರಾಮಹಕರ ಗಮನ ಸೆಳೆಯುತ್ತಿದೆ. ಒಟ್ಟಿನಲ್ಲಿ ದೀಪಗಳ ಹಬ್ಬ ದೀಪಾವಳಿ ಹಬ್ಬವನ್ನು ಧಾರವಾಡದಲ್ಲಿ ಸಂಭ್ರಮದೊಂದಿಗೆ ಆಚರಣೆ ಮಾಡಲಾಗುತ್ತಿದೆ.