ಧಾರವಾಡ: ಮುಡಾ ಹಗರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಧಾರವಾಡ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಸತತ ಮೂರು ಗಂಟೆಗಳಿಂದ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ ಮನು ಸಿಂಘ್ವಿ, ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಪಿಲ್ ಸಿಬಲ್, ವಿವಾದಿತ ನಿವೇಶನದ ಮೂಲ ಮಾಲೀಕ ಜೆ.ದೇವರಾಜ ಪರ ದುಷ್ಯಂತ ಧವೆ ಹಾಗೂ ಸ್ನೇಹಮಯಿ ಕೃಷ್ಣ ಪರ ಮಣಿಂದರ್ ಸಿಂಗ್ ವಕಾಲತ್ತು ವಹಿಸಿದ್ದಾರೆ.
ಮೊದಲು ವಾದ ಮಾಡಿದ ಸ್ನೇಹಮಯಿ ಕೃಷ್ಣ ಪರ ವಕೀಲ ಮಣಿಂದರ್ ಸಿಂಗ್, ನರ್ಮದಾ ಬಾಯ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಓದಿದ್ದಾರೆ. ಸ್ಥಳೀಯ ರಾಜಕಾರಣಿಗಳು ಹಗರಣದಲ್ಲಿದ್ದಾಗ ಪೊಲೀಸರು ಆಳ, ಅಗಲಕ್ಕೆ ಹೋಗಿ ತನಿಖೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಇದನ್ನು ಸಿಬಿಐಗೆ ಕೊಡುವುದು ಸೂಕ್ತ ಎಂದು ವಾದ ಮಾಡುವುದರ ಜೊತೆಗೆ ಮಿಥಿಲೇಶ್ ಕುಮಾರ್ ಪ್ರಕರಣದ ಆದೇಶವನ್ನು ಓದಿ ಸುದೀರ್ಘವಾಗಿ ವಾದ ಮಂಡಿಸಿದರು.
Periods: ಮಹಿಳೆಯರೇ ಗಮನಿಸಿ.. ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ..? ಇಲ್ಲಿದೆ ಮಾಹಿತಿ
ನಮ್ಮ ಮೇಲ್ಮನವಿದಾರರು ಸಣ್ಣ ಭೂ ಮಾಲೀಕರಾಗಿದ್ದಾರೆ. ಅವರು 25 ವರ್ಷಗಳ ಹಿಂದೆಯೇ ಭೂಮಿ ಮಾರಾಟ ಮಾಡಿ ಅದು ಮುಗಿದು ಹೋಗಿದೆ. ಆದರೆ, ದೊಡ್ಡ ರಾಜಕಾರಣಿಗಳು ಇದರಲ್ಲಿ ಸಿಲುಕುವಂತಾಗಿದ್ದು, ನಮ್ಮ ಅರ್ಜಿದಾರರೂ ಇದರಕ್ಕಿ ಸಿಲುಕುವಂತಾಗಿದೆ. ಇದರಲ್ಲಿ ಹಾಲಿ ಸಿಎಂ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆದಿದೆ. ಇಂತಹ ಅರ್ಜಿಗಳಿಗೆ ಕೋರ್ಟ್ ಸಮಯ ವ್ಯರ್ಥ ಮಾಡಬೇಡಿ. ಲೋಕಾಯುಕ್ತ ಎಲ್ಲೂ ತನಿಖೆಯ ದಾರಿ ತಪ್ಪಿಸಿಲ್ಲ ಆದರೂ ಸಿಬಿಐ ತನಿಖೆಗೆ ವಹಿಸಿ ಎನ್ನುವುದು ಏಕೆ? ಪತ್ರಕರ್ತ, ಸಿನಿಮಾ ನಿರ್ಮಾಪಕಾಗಿದ್ದ ಸ್ನೇಹಮಯಿ ಕೃಷ್ಣ ಇಷ್ಟು ವರ್ಷ ಎಲ್ಲಿದ್ದರು? ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ಆದ್ಯತೆ ನೀಡಬೇಕು. ಖಾಸಗಿ ಲಾಭಗಳಿಗೆ ಪ್ರಯತ್ನಿಸುವ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಜಮೀನಿನ ಮೂಲ ಮಾಲೀಕರ ಪರ ವಕೀಲ ದುಷ್ಯಂತ ಧವೆ ವಾದ ಮಂಡಿಸಿದರು.
ಈಗ ಸಿಎಂ ಪರ ವಕೀಲ ಕಪಿಲ್ ಸಿಬಲ್ ವಾದ ಆರಂಭಿಸಿದ್ದಾರೆ. ವೀಡಿಯೋ ಕಾನ್ಫರನ್ಸ್ ಮೂಲಕ ಕಪಿಲ್ ಸಿಬಲ್ ಅವರು ಕಲಾಪಕ್ಕೆ ಹಾಜರಾಗಿದ್ದಾರೆ. ಬೆಳಿಗ್ಗೆ 10-30 ರಿಂದ ಕೋರ್ಟ್ ಕಲಾಪ ಆರಂಭವಾಗಿದ್ದು, ಈ ಮುಡಾ ಕೇಸ್ ವಿಚಾರಣೆಯೇ 2 ಗಂಟೆಯವರೆಗೂ ನಡೆದಿದ್ದು, ಇನ್ನೂ ಅರ್ಜಿಯ ವಿಚಾರಣೆ ಪೂರ್ಣಗೊಂಡಿಲ್ಲ