ಧಾರವಾಡ: ಗ್ಯಾರೇಜ್ ಕೆಲಸ ಮುಗಿಸಿಕೊಂಡು ಸ್ಕೂಟಿ ಮೇಲೆ ವಾಪಸ್ ಮನೆ ಕಡೆಗೆ ಹೊರಟಿದ್ದ ಮೆಕ್ಯಾನಿಕ್ ಒಬ್ಬನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ಬಳಿ ಇದ್ದ ಹಣವನ್ನು ದರೋಡೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪ ಕ್ರಾಸ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಪ್ರಿಯಾಂಕ ಖರ್ಗೆ ರಾಜೀನಾಮೆ ಕೇಳುವುದರಲ್ಲಿ ಅರ್ಥವೇ ಇಲ್ಲ: ಸಿದ್ದರಾಮಯ್ಯ!
ಧಾರವಾಡದ ಹೆಬ್ಬಳ್ಳಿ ಫಾರ್ಮ್ ನಿವಾಸಿ ಆದಿಲ್ ಮಸ್ತಾನವಾಲೆ ಎಂಬಾತ ಮದುವೆಗೆಂದು ಬ್ಯಾಂಕ್ನಿಂದ ಸಾಲ ತೆಗೆದುಕೊಂಡಿದ್ದ. ಆದಿಲ್ ಧಾರವಾಡದಲ್ಲಿ ಗ್ಯಾರೇಜ್ ಹೊಂದಿದ್ದು, ನಿನ್ನೆ ಗ್ಯಾರೇಜ್ ಕೆಲಸ ಮುಗಿಸಿಕೊಂಡು ಬ್ಯಾಂಕ್ನಿಂದ ಪಡೆದುಕೊಂಡಿದ್ದ ಇಟ್ಟ 1 ಲಕ್ಷ 80 ಸಾವಿರ ಹಣವನ್ನು ತನ್ನ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟುಕೊಂಡು ಮನೆ ಕಡೆ ಹೊರಟಿದ್ದ.
ಈ ವೇಳೆ ಗೋವನಕೊಪ್ಪದ ಬಳಿ ಆದಿಲ್ನ ಸ್ಕೂಟಿ ತಡೆದ ನಾಲ್ವರು ದರೋಡೆಕೋರರು ಆತನ ಕಣ್ಣಿಗೆ ಕಾರದಪುಡಿ ಎರಚಿ ಆತನ ಸ್ಕೂಟಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಅದೇ ರಸ್ತೆಯಲ್ಲಿ ಸ್ಕೂಟಿ ಸಮೇತ ಹೋದ ದರೋಡೆಕೋರರು ಡಿಕ್ಕಿಯಲ್ಲಿದ್ದ ಹಣವನ್ನು ದೋಚಿಕೊಂಡು ಸ್ಕೂಟಿಯನ್ನು ರಸ್ತೆ ಪಕ್ಕಕ್ಕೆ ಬೀಳಿಸಿ ಪರಾರಿಯಾಗಿದ್ದಾರೆ. ಈ ಸ್ಕೂಟಿ ಬೆಳಿಗ್ಗೆ ಪತ್ತೆಯಾಗಿದೆ. ಸದ್ಯ ಆದಿಲ್ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.