ಧಾರವಾಡ : ಎಟಿಎಂ ಹಣ ಹಾಕುವ ವಾಹನದ ಸಿಬ್ಬಂದಿಗಳ ಮೇಲೆ ಫೈರಿಂಗ್ ಪ್ರಕರಣದ ಬಳಿಕ ಧಾರವಾಡ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಧಾರವಾಡ ಎಸಿಪಿ ಪ್ರಶಾಂತ್ ಜಿಲ್ಲೆಯ ಎಲ್ಲಾ ಬ್ಯಾಂಕ್ ಮ್ಯಾನೇಜರ್ ಅಧಿಕಾರಿಗಳು, ಮತ್ತು ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು. ಎಟಿಎಂ ಗಳಿಗೆ ಹಣ ಹಾಕುವ ಸೆಕ್ಯೂರಿಟಿ ಏಜನ್ಸಿಗಳ ಜೊತೆ ಸಭೆ ನಡೆಸಿ, ಕೆಲವು ಎಚ್ಚರಿಕೆ ಸಂದೇಶಗಳನ್ನು ನೀಡಿದರು. ಪ್ರತಿದಿನ ಎಷ್ಟು ಹಣ ಹಾಕ್ತಿರಾ..? ಗನ್ ಮ್ಯಾನ್ ಗಳ ಕಡೆ ಬಂದೂಕು ಇದ್ಯಾ..? ಇಲ್ವಾ..? ಹಣ ಸಾಗಿಸುವ ವಾಹನಗಳಿಗೆ ಜಿಪಿಎಸ್ ಇದ್ಯಾ..? ಇಲ್ವಾ..? ಅಂತಾ ಪ್ರಶ್ನಿಸಿ, ಕಳ್ಳತನ ಪ್ರಕರಣಗಳಾದರೆ ಯಾರು ಹೊಣೆ ಎಂದು ಎಟಿಎಂ ಗೆ ಹಣ ಹಾಕುವ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮತ್ತೊಂದು ದರೋಡೆ ಪ್ರಕರಣ: ಮಂಗಳೂರಿನಲ್ಲಿ ಬಂದೂಕು ತೋರಿಸಿ ಹಾಡುಹಗಲೇ ಬ್ಯಾಂಕ್ ಲೂಟಿ!