ಧಾರವಾಡ:- ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಅಂಬುಲೆನ್ಸ್ ಗೆ ಬೆಂಕಿ ಹೊತ್ತಿಕೊಂಡಿದ್ದು, ನಿಂತಿರುವ ಅಂಬುಲೆನ್ಸ್ ಏಕಾಏಕಿ ಹೊತ್ತಿ ಉರಿದಿದೆ.
ಹಾಡಹಗಲೇ ರೈತನ ಬೈಕ್ನಲ್ಲಿದ್ದ 7 ಲಕ್ಷ ಲೂಟಿ: ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಅಗ್ನಿ ಅವಘಡದಿಂದ ಆ್ಯಂಬುಲೆನ್ಸ್ ಸುಟ್ಟು ಕರಕಲಾಗಿದೆ. ಘಟನೆ ವೇಳೆ ಪಕ್ಕದಲ್ಲೇ 5 ಅಂಬುಲೆನ್ಸ್ ಗಳಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾನ ಸಂಭವಿಸಿಲ್ಲ. ಮಟಮಟ ಮದ್ಯಾಹ್ನದ ವೇಳೆ ಈ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದರು.
ಉರಿಸಿಬಿಸಿಲಿನಲ್ಲಿ ಬೆಂಕಿ ನಂದಿಸಲು ಸಾರ್ವಜನಿಕರು ಮುಂದಾಗಿದ್ದು, ಕೊನೆಗೂ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.