ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೀಕರಣಗೊಳಿಸಿದ ಅನ್ನಪೂರ್ಣ ಭೋಜನಶಾಲೆಯನ್ನ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ರು. ಈ ಕಾರ್ಯಕ್ರಮದಲ್ಲಿ ಪ್ರಜಾಟಿವಿ ಮುಖ್ಯಸ್ಥ ಪುಟ್ಟರಾಜ್ ಹಾಗೂ ಉದ್ಯಮಿ ಸ್ವಾಮಿಗೌಡ ಭಾಗವಹಿಸಿದ್ರು.
ಪ್ರತಿ ದಿನ 40 ರಿಂದ 50 ಸಾವಿರ ಜನಕ್ಕೆ ಅನ್ನ ಪ್ರಸಾದ ನೀಡುವ ನವೀಕರಣಗೊಂಡ ಅನ್ನಪೂರ್ಣ ಭೋಜನಶಾಲೆಯ ಕುರಿತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಅನೇಕ ವಿಚಾರಗಳನ್ನ ಪ್ರಜಾಟಿವಿ ಮುಖ್ಯಸ್ಥ ಪುಟ್ಟರಾಜ್ ಅವರ ಜೊತೆ ಹಂಚಿಕೊಂಡರು. ಇದೆ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನ ಪ್ರಜಾಟಿವಿ ಮುಖ್ಯಸ್ಥ ಪುಟ್ಟರಾಜ್ ಅವರು ಸನ್ಮಾನಿಸಿದರು.
ಒಂದು ದಿನಕ್ಕೆ ಸುಮಾರು ಎಂಟೂವರೆ ಸಾವಿರ ಕೆಜಿ ಅಕ್ಕಿ ಬಳಸಿ ಊಟ ತಯಾರು ಮಾಡುತ್ತಾರೆ. ಜೊತೆಗೆ, ಮೂರುವರೆ ಸಾವಿರ ಕೆಜಿ ತರಕಾರಿ ಬಳಸಿ ಸಾಂಬಾರು ಮಾಡಲಾಗುತ್ತದೆ. ಇಲ್ಲಿರುವ ವಿಶಾಲವಾದ ಭೋಜನ ಶಾಲೆಯಲ್ಲಿ ಒಂಬತ್ತು ಸಾಲುಗಳಲ್ಲಿ ಭಕ್ತಾದಿಗಳು ಕೂತು ಊಟ ಮಾಡಬಹುದು. ಒಂದು ಸಾಲಿನಲ್ಲಿ ಕಡಿಮೆ ಎಂದರೂ 400 ಜನ ಕುಳಿತು ಊಟ ಮಾಡಬಹುದು. ಇನ್ನೊಂದು ಮುಖ್ಯವಾದ ವಿಷಯ ಎಂದರೆ, ಧರ್ಮಸ್ಥಳದಲ್ಲಿ ಸಿಗುವಂತಹ ಆನ್ನ ಪ್ರಸಾದ ನಮ್ಮ ದೇಶದ ಬೇರೆ ಯಾವುದೇ ದೇವಸ್ಥಾನಗಳಲ್ಲಿ ಕೂಡ ಸಿಗುವುದಿಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ, ಈ ನಮ್ಮ ಧರ್ಮಸ್ಥಳದ ಅನ್ನ ಪ್ರಸಾದ.
ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ಬರುವ ಭಕ್ತರ ಸಂಖ್ಯೆ ಅಪಾರವಿದ್ದು. ಹಾಗಾಗಿ, ಧರ್ಮಸ್ಥಳಕ್ಕೆ ಬಂದಂತಹ ಯಾವುದೇ ಭಕ್ತರು ಹಸಿವಿನಿಂದ ಮರಳಿ ಹೋಗಬಾರದು ಎನ್ನುವ ಉದ್ದೇಶದಿಂದ, 1955 ರಿಂದಲೇ ಇಲ್ಲಿ ಅನ್ನದಾನ ಮಾಡಲು ಪ್ರಾರಂಭಿಸಲಾಯಿತು. ಇಂತಹ ಮಹತ್ವದ ಯೋಜನೆಯನ್ನು ಇಂದಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಂದೆ ಜಾರಿಗೆ ತಂದರು. ವಿಶಾಲವಾಗಿರುವ ಈ ಭೋಜನ ಸ್ಥಳದಲ್ಲಿ ಒಂದು ದಿನಕ್ಕೆ ಕಡಿಮೆ ಎಂದರೂ 40 ರಿಂದ 50 ಸಾವಿರ ಜನ ಊಟ ಮಾಡುತ್ತಾರೆ.
ಇನ್ನು, ದೀಪೋತ್ಸವದ ಸಂದರ್ಭದಲ್ಲಂತೂ ಹೆಚ್ಚು ಕಡಿಮೆ ಒಂದು ಲಕ್ಷ ಜನ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಧರ್ಮಸ್ಥಳ ಕ್ಷೇತ್ರ ಪ್ರಸಿದ್ಧವಾಗಿರುವುದೇ ಶುಚಿ ರುಚಿಯಾದ ಅನ್ನ ಪ್ರಸಾದದಿಂದ. ಇಲ್ಲಿ ಮೊದಲು ಆದ್ಯತೆ ನೀಡುವುದೇ ಸ್ವಚ್ಛತೆಗೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಕಾಪಾಡಿಕೊಳ್ಳಲಾಗುತ್ತಿರುವ ಸ್ವಚ್ಚತೆಯ ಬಗ್ಗೆ ಸುಪ್ರೀಂಕೋರ್ಟ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಇಲ್ಲಿ ಬಳಸುವ ಸಾಮಗ್ರಿಯಿಂದ ಹಿಡಿದು ಅಡುಗೆವರೆಗೆ ಎಲ್ಲಾ ಕಡೆಯೂ ಆಧುನಿಕ ತಂತ್ರಜ್ಞಾನವನ್ನ ಉಪಯೋಗಿಸುತ್ತಾರೆ.