ತಮಿಳಿನ ಸ್ಟಾರ್ ನಟ ಧನುಶ್ ಹಾಗೂ ರಜನೀಕಾಂತ್ರ ಪುತ್ರಿ ಐಶ್ವರ್ಯಾ ಅವರಿಗೆ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದೆ. ಎರಡು ವರ್ಷದ ಹಿಂದೆಯೇ ಈ ಜೋಡಿ ತಾವು ದೂರಾಗುತ್ತಿರುವುದಾಗಿ ಹೇಳಿ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿದ್ದರು. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ನಿನ್ನೆ ಧನುಶ್ ಹಾಗೂ ಐಶ್ವರ್ಯಾ ಅವರಿಗೆ ವಿಚ್ಛೇದನ ಮಂಜೂರಾಗಿದೆ. ಆ ಮೂಲಕ 20 ವರ್ಷಗಳ ಅವರ ದಾಂಪತ್ಯ ಜೀವನ ಕೊನೆಯಾಗಿದೆ.
2004 ರಲ್ಲಿ ಧನುಶ್ ಮತ್ತು ಐಶ್ವರ್ಯಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿದ್ದಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿಯನ್ನು ಪ್ರೀತಿಸಿ ವಿವಾಹವಾಗಿದ್ದರು ಧನುಶ್. ಇವರ ಮದುವೆ ಆಗಿನ ಕಾಲಕ್ಕೆ ಭಾರಿ ಅದ್ಧೂರಿಯಾಗಿ ನಡೆದಿತ್ತು. ಈಗ ಬರೋಬ್ಬರಿ 20 ವರ್ಷದ ಬಳಿಕ ಈ ಜೋಡಿ ವಿಚ್ಛೇದನ ಪಡೆದುಕೊಂಡಿದೆ. ನವೆಂಬರ್ 27 ರಂದು ಅಧಿಕೃತವಾಗಿ ಇವರಿಗೆ ವಿಚ್ಛೇದನ ದೊರೆತಿದೆ.
2022 ರಲ್ಲಿ ಈ ಜೋಡಿ ತಾವು ಪರಸ್ಪರ ದೂರಾಗುತ್ತಿರುವುದಾಗಿ ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ರಜನೀಕಾಂತ್ಗೆ ಅನಾರೋಗ್ಯ ಇದ್ದ ಸಮಯದಲ್ಲಿಯೇ ಈ ಘೋಷನೆ ಬಂದಿತ್ತು. ಮಕ್ಕಳನ್ನು ಒಟ್ಟಿಗೆ ಸಾಕುವುದಾಗಿ ದಂಪತಿಗಳು ಘೋಷಿಸಿದ್ದರು. ಆದರೆ ಅದಾದ ಬಳಿಕ ಮತ್ತೆ ಈ ಜೋಡಿ ಒಂದಾಗಲಿದೆ. ರಜನೀಕಾಂತ್ ಸಂಧಾನ ನಡೆಸಿದ್ದು ಈ ಜೋಡಿ ಮತ್ತೆ ಒಟ್ಟಿಗೆ ಬಾಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಅದು ಸುಳ್ಳಾಗಿದೆ. ನವೆಂಬರ್ 21 ರಂದು ಕೊನೆಯ ವಿಚಾರಣೆಗಾಗಿ ಚೆನ್ನೈನ ಫ್ಯಾಮಿಲಿ ಕೋರ್ಟ್ಗೆ ಈ ಜೋಡಿ ಹಾಜರಾಗಿದ್ದು, ನವೆಂಬರ್ 27 ರಂದು ನ್ಯಾಯಾಲಯವು ಈ ದಂಪತಿಗಳಗೆ ವಿಚ್ಛೇದನ ನೀಡಿದೆ.