ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 93ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ದೊಡ್ಮನೆಯಲ್ಲಿ 9 ಮಂದಿ ಇದ್ದು, ಈ ಪೈಕಿ ಒಬ್ಬರು ಈ ವಾರ ಹೊರ ಹೋಗಲಿದ್ದಾರೆ. ಈ ಮೂಲಕ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಲಿದೆ. ಈ ಮೂಲಕ ಫಿನಾಲೆಗೆ ದಿನಾಂಕ ಹತ್ತಿರ ಆಗುತ್ತಲೇ ಇದೆ.
ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಆದ್ದರಿಂದ ಯಾವುದೇ ಟಾಸ್ಕ್ಗಳು ನಡೆಯುತ್ತಿಲ್ಲ. ಕುಟುಂಬದವರು ಬಂದು ಹೋಗುತ್ತಿದ್ದಾರೆ. ಈಗಾಗಲೇ ಮೋಕ್ಷಿತಾ, ಗೌತಮಿ, ತ್ರಿವಿಕ್ರಂ, ಮಂಜು ಕುಟುಂಬದವರು ಬಂದು ಹೋಗಿದ್ದಾರೆ. ಈಗ ಧನರಾಜ್ ಅವರ ಕೂಡು ಕುಟುಂಬ ಕೂಡ ಬಂದಿದೆ.
Chanakya Niti: ನಿಮಗಿರುವ ಕಷ್ಟಗಳನ್ನು ಎದುರಿಸಲು ಚಾಣಕ್ಯ ಹೇಳಿದ ಈ 10 ವಿಷಯಗಳನ್ನು ನೆನಪಿಡಿ ಸಾಕು.!
ಕುಟುಂಬದ ಸದಸ್ಯರನ್ನು ನೋಡಿದ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಅವರ ಪತ್ನಿ ಪ್ರಜ್ಞಾ ತಮ್ಮದೇ ಸ್ಟೈಲ್ನಲ್ಲಿ ಪತಿಯ ಕಾಲೆಳೆದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.