ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಡಾಲಿ ಧನಂಜಯ್ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಮದುವೆ ಸುದ್ದಿಯನ್ನು ಅನೌನ್ಸ್ ಮಾಡಿದ್ದ ಡಾಲಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಲಗ್ನ ಪತ್ರಿಕೆಯನ್ನು ಹಂಚಿಕೊಂಡಿದ್ದಾರೆ.
ನಮ್ಮ ಮದುವೆ ಕಾರ್ಡ್ ರೆಡಿ ಎಂದು ಸ್ಮೈಲ್ ಎಮೋಜಿಯನ್ನು ಹಾಕಿದ ಧನಂಜಯ್ ಅವರು ಮದುವೆ ಇನ್ವಿಟೇಷನ್ ಶೇರ್ ಮಾಡಿದ್ದಾರೆ. ಪೋಸ್ಟ್ನಲ್ಲಿ ಭಾವೀ ಪತ್ನಿ ಡಾ.ಧನ್ಯತಾ ಅವರನ್ನು ಕೂಡಾ ಟ್ಯಾಗ್ ಮಾಡಿದ್ದಾರೆ.
ಡಾಲಿ ಮದುವೆ ಆಮಂತ್ರಣ ಫೊಟೋ ಶೇರ್ ಮಾಡುತ್ತಿಷದ್ದಂತೆ ನೆಟ್ಟಿಗರು ಫಿದಾ ಆಗಿದ್ದಾರೆ. ನಟನಿಗೆ ಕಮೆಂಟ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ಧನತ್ಯಾ ಹಾಗೂ ಡಾಲಿ ಧನಂಜಯ್ ಸಿಂಪಲ್ ಆಗಿ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಮನ ಮೆಚ್ಚಿದ ಹುಡುಗಿಯ ಜೊತೆ ಡಾಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.