ಬೆಂಗಳೂರು:- ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಅಪರೂಪದ ಘಟನೆಯೊಂದು ಜರುಗಿದೆ. ಕಾಸು ಕೊಟ್ಟು ಪೊರಕೆ ಮೊರದಲ್ಲಿ ಏಟು ತಿನ್ನಲು ಭಕ್ತರು ಮುಗಿಬಿದ್ದಿರುವಂತಹ ಅಪರೂಪದ ಘಟನೆಯೊಂದು ಜರುಗಿದೆ.
ಗೋಲ್ಡ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್.. ಚಿನ್ನದ ಬೆಲೆ ಗ್ರಾಮ್ಗೆ 75 ರೂನಷ್ಟು ಇಳಿಕೆ..ಇಲ್ಲಿದೆ ದರಪಟ್ಟಿ
ದ್ರೌಪತಮ್ಮ ಕರಗದ ಅಂಗವಾಗಿ ನಡೆಯುವ ಕೋಟೆ ಜಗಳ ಎಂಬ ವಿಶಿಷ್ಟ ಧಾರ್ಮಿಕ ಆಚರಣೆಯಲ್ಲಿ ಕಾಳಿ ವೇಷಧಾರಿಯಿಂದ ಭಕ್ತರಿಗೆ ಪೊರಕೆ ಮೊರದೇಟು ನೀಡಲಾಗಿದೆ. ಬಲಿ ನೀಡಲಾದ ಮೇಕೆಯ ಶ್ವಾಸಕೋಶವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುವ ಕಾಳಿ ವೇಶಧಾರಿ, ಸಿಕ್ಕ ಸಿಕ್ಕವರಿಗೆ ಪೊರಕೆ, ಮೊರದಲ್ಲಿ ಹೊಡೆಯುವ ದೃಶ್ಯ ಮಾತ್ರ ರೋಮಾಂಚಕಾರಿ ಆಗಿರುತ್ತದೆ. ಕೋಟೆ ಜಗಳಕ್ಕಾಗಿ ನೂರಾರು ಮಂದಿ ಜನರು ಜಮಾಯಿಸಿದ್ದರು. ಈ ಜಗಳದಲ್ಲಿ ಕಾಳಿ ದೇವಿಯ ಆವಾಹನೆಗೆ ವ್ಯಕ್ತಿ ಒಳಗಾಗುತ್ತಾರೆ. ಕರಗದ ಗುಡಿಯಲ್ಲಿ ಗುಡಿಸಿದ ಪೊರಕೆ, ಮೊರದಲ್ಲಿ ಹೊಡೆಸಿಕೊಂಡರೇ ಒಳ್ಳೆದಾಗುತ್ತೆ, ನಕಾರಾತ್ಮಕ ಅಂಶಗಳು ನಾಶವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳಲು ಮುಗಿಬಿದ್ದಿದ್ದರು ಎನ್ನಲಾಗಿದೆ.