ಗದಗ:- ನಗರದಲ್ಲಿ ಕೆಲ ಕುಟುಂಬಗಳು ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಮಟನ್ ಕೈಮಾ ಸೇರಿದಂತೆ ಮಟನ್, ಚಿಕನ್ ಪದಾರ್ಥ ಮಾಡಿ ವಿನಾಯಕನಿಗೆ ಅರ್ಪಿಸಿದ್ದಾರೆ.
ಕಮ್ಬ್ಯಾಕ್ ವೇದಿಕೆಯಲ್ಲೇ ಫ್ಲಾಪ್: KL ರಾಹುಲ್ಗೆ ಟೀಂ ಇಂಡಿಯಾ ಡೋರ್ ಕ್ಲೋಸ್..?
ಎಸ್.ಎಸ್.ಕೆ ಸಮಾಜದ ಕುಟುಂಬಗಳಿಂದ ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸಲಾಗುತ್ತೆ. ಈ ವಿಶಿಷ್ಠ ಆಚರಣೆ ಕಂಡು ಬಂದಿದ್ದು, ಗದಗ ನಗರದ ಕಾನತೋಟ್ ಓಣಿಯ ಪರಶುರಾಮಸಾ ಪವಾರ, ನಾರಾಯಣಸಾ ಪವಾರ ಮನೆಗಳಲ್ಲಿ. ಗಣೇಶ ಚತುರ್ಥಿಯಂದು ಎಸ್.ಎಸ್.ಕೆ ಸಮಾಜ ಬಾಂಧವರ ಮನೆಗಳಲ್ಲಿ ವಿನಾಯಕನ್ನು ಪ್ರತಿಷ್ಠಾಪಿಸಲಾಗುತ್ತೆ. ಎರಡನೇ ದಿನವಾದ ಇಂದು ಇಲಿ ಹಬ್ಬ ಅಂತ ಆಚರಣೆ ಮಾಡುತ್ತಾರೆ.
ಏಕದಂತನಿಗೆ ಮೋದಕ, ವಿವಿಧ ನಮೂನೆಯ ಖ್ಯಾದ್ಯಗಳ ನೈವೇದ್ಯ ಅರ್ಪಿಸಿ ಪೂಜೆ ಮಾಡ್ತಾರೆ. ಆದ್ರೆ, ಗದಗಲ್ಲೊಂದು ಕುಟುಂಬ ವಿಘ್ನೇಶ್ವರನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸ್ತಾರೆ. ಗಣೇಶನಿಗೆ ಭರ್ಜರಿ ನಾನ್ ವೆಜ್ ನೈವೇದ್ಯ ಅರ್ಪಿಸಿ ಭಕ್ತಿ ತೋರ್ತಾರೆ. ಎಸ್.ಎಸ್.ಕೆ ಸಮಾಜದ ಈ ಮನೆಗಳಲ್ಲಿ ತಲತಲಾಂತರದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆಯಂತೆ. ಎರಡನೇ ದಿನವಾದ ಇಂದು ಇಲಿ ಹಬ್ಬದ ನಿಮಿತ್ಯ ಮನೆಗಳಲ್ಲಿ ಮಟನ್, ಚಿಕನ್ ಖ್ಯಾದ್ಯಗಳು ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಮಹಿಳೆಯರು ಇಂದು ಬೆಳ್ಳಗ್ಗೆ ಎದ್ದು ಮಟನ್, ಚಿಕನ್ ಐಟಂಗಳು ಮಾಡುತ್ತಾರೆ. ವಿಶೇಷ ಅಂದ್ರೆ ಮಟನ್ನಲ್ಲಿ ತಯಾರಿಸಿದ ಖ್ಯಾದ್ಯದಲ್ಲಿ ದೀಪ ಹಚ್ಚಿ ಗಣೇಶನಿಗೆ ಆರತಿ ಮಾಡುತ್ತಾರೆ.
ಶ್ರಾವಣ ಮಾಸದ ಆರಂಭಕ್ಕೂ ಮುನ್ನ ಈ ಕುಟುಂಬಗಳಲ್ಲಿ ನಾನ್ ವೆಜ್ ಸೇವನೆ ತ್ಯಾಗ ಮಾಡ್ತಾರೆ. ಶ್ರಾವಣ ಮಾಸ ಕಟ್ಟುನಿಟ್ಟಾಗಿ ಪಾಲನೆ ಮಾಡ್ತಾರಂತೆ. ಗಣೇಶ ಚತುರ್ಥಿಯಿಂದ ಗಣೇಶನ ಪ್ರತಿಷ್ಠಾಪನೆ ಮಾಡ್ತಾರೆ. ಅಂದು ಮೋದಕ, ವಿವಿಧ ನಮೂನೆಯ ಲಾಡು ತಯಾರಿಸಿ ನೈವೇದ್ಯ ಅರ್ಪಿಸ್ತಾರೆ. ಮರುದಿನ ಇಲಿ ಹಬ್ಬ ಅಂತ ಆ ಚರಣೆ ಮಾಡ್ತಾರೆ. ಇಂದು ಗಣೇಶನ ವಾಹನ ಇಲಿಗೆ ಪೂಜೆ ಮಾಡ್ತಾರೆ. ಇಲಿಗೆ ಪಂಚ ಫಳಾರ ಅರ್ಪಿಸಿ ಭಕ್ತಿ ಮೆರೆದಿದ್ದಾರೆ