ಬೆಂಗಳೂರು: ರಾಮನ ಬರುವಿಕೆಗೆ ದಿನಗಳಿಗೆ ಆರಂಭವಾಗಿದೆ ಇಡೀ ದೇಶದಲ್ಲಿ ಹಬ್ಬದ ವಾತಾವರಣ , ಎಲ್ಲೆಲ್ಲೂ ರಾಮನಾಮ ಜಪ. ಇನ್ನೇನು ಕೆಲ ದಿನಗಳಷ್ಟೇ ರಾಮನನ್ನು ಕಣ್ ತುಂಬಿಕೊಳ್ಳಲು ಇಡೀ ಭಾರತವೇ ಕಾಯುತ್ತಿದೆ, ವಿವಿಧ ರಾಜ್ಯಗಳಿಂದ ಅಯೋಧ್ಯೆಯತ್ತ ಭಕ್ತರ ಉಡುಗೊರೆಗಳ ಮಹಾಪೂರವೇ ಹರಿದು ಹೋಗುತ್ತಿದೆ.. ಹಾಗೆ ಇತ್ತ ಬೆಂಗಳೂರಿನಿಂದ ರಾಮಭಕ್ತರು ಬೆಳ್ಳಿಯ ಇಟ್ಟಿಗೆ ರಾಮನಿಗೆ ಸರ್ಮಪಿಸಲು ಮುಂದಾಗಿದ್ದಾರೆ.
ಹೌದು.. ಹೀಗೆ ವಿಘ್ನ ವಿನಾಶಕನ ಮಂದಿರದಲ್ಲಿ ಅಯೋಧ್ಯೆಯ ರಾಮಮಂದಿರಕ್ಕೆ ಅರ್ಪಿಸಲು ಸಿದ್ಧಪಡಿಸಿರುವ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸುತ್ತಿರುವ ರಾಮಭಕ್ತರು.. ಎಲ್ಲರ ಮುಖದಲ್ಲೂ ಸಂತೋಷ , ಪ್ರತಿಯೊಬ್ಬರು ಶ್ರೀ ರಾಮನನ್ನು ಜಪಿಸುತ್ತಿದ್ದಾರೆ.. ಶ್ರೀ ರಾಮನ ಮಂದಿರದ ನಿರ್ಮಾಣವಾಗಬೇಕೆಂದು ಕಳೆದ 2019ರಲ್ಲಿ ಬೆಂಗಳೂರಿನ ಹೂಡಿಯಿಂದ ಅಯೋಧ್ಯೆ ಪಾದಯಾತ್ರೆ ಕೈಗೊಳ್ಳಲಾಗಿತ್ತು.. ರಾಮಮಂದಿರ ನಿರ್ಮಾಣವಾಗಲೇ ಬೇಕೆಂದು ಹೂಡಿಯ ರಾಮಭಕ್ತ ಮಂಜುನಾಥ್ ಹಾಗೂ 12 ಜನ ತಂಡದವರಿಂದ ಈ ಒಂದು ಮಹತ್ ಕಾರ್ಯಕ್ಕೆ ಕೈ ಹಾಕಲಾಗಿದೆ.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಇನ್ನು ರಾಮನ ಭಕ್ತಿ ಆಚಲ ಶಕ್ತಿ ಎಂಬ ಮಾತಿಗೆ ಋಣಿಯಾದವರು ಇವರು. ಕೈಗೊಂಡಿದ ಪಾದಯಾತ್ರೆಯಲ್ಲಿ ಹಲವು ಅಡಚಣೆಗಳು ಬಂದರೂ ಮುನ್ನುಗ್ಗಿ ಕೈಗೊಂಡ ಯಜ್ಞ ಸಂಪೂರ್ಣಗೊಳಿಸಿ ಹಿಂದಿರುಗಿದ 18 ದಿನಕ್ಕೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿತ್ತು.. 2020 ರಲ್ಲಿ ಭೂಮಿ ಪೂಜೆ , 2024ರ ಜನವರಿ 22ಕ್ಕೆ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಈ ಸಂತೋಷದ ಶುಭಗಳಿಗೆಯಲ್ಲಿ ನಾವು ,
ನಮ್ಮವರೆಲ್ಲರೂ ಭಾಗಿಯಾಗಬೇಕೆಂದು ತೀರ್ಮಾನಿಸಿ ಹೂಡಿ ಗ್ರಾಮ ಹಾಗೂ ಸುತ್ತಮುತ್ತಲಿನ ಊರಿನ ಜನರ ಸಹಕಾರದಲ್ಲಿ ಹಣ ಸಂಗ್ರಹಿಸಿ 2 ಕೆಜಿ ತೂಕದ ಬರೋಬ್ಬರಿ 1 ಲಕ್ಷ 84 ಸಾವಿರ ಮೌಲ್ಯದ ಬೆಳ್ಳಿ ಇಟ್ಟಿಗೆ ನೀಡಲು ರಾಮನೂರಿಗೆ ಪ್ರಯಾಣ ನಡೆಸುತ್ತಿದ್ದಾರೆ. ಒಟ್ನಲ್ಲಿ ದೃಢಸಂಕಲ್ಪ, ನಿಷ್ಕಲ್ಮಶ ಭಕ್ತಿಗೆ ಎಲ್ಲವೂ ಸಾಧ್ಯ ಎಂಬ ಮಾತಿಗೆ ಈ ರಾಮಭಕ್ತರ ತಂಡ ಸಾಕ್ಷಿಯಾಗಿದ್ದು ,ರಾಮನಿಗೆ ಅರ್ಪಿಸಲು ಬೆಳ್ಳಿ ಇಟ್ಟಿಗೆ ಸಮೇತ ಅಯೋಧ್ಯೆಗೆ ಪ್ರಯಾಣ ನಡೆಸುತ್ತಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ ಭಕ್ತರ ಪ್ರೀತಿಯ ಉಡುಗೊರೆ ಆ ರಾಮನ ಮಂದಿರದಲ್ಲಿ ಕಾಣಸಿಗಲಿ ಎಂದು ಆಶಿಸೋಣ.