ದೊಡ್ಡಬಳ್ಳಾಪುರ :- ತಾಲೂಕಿನ ಹಳೇಕೋಟೆ ಗ್ರಾಮದ ರೈತನ ಹೊಲದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ರೈತರಲ್ಲಿ ಆತಂಕವನ್ನು ಉಂಟುಮಾಡಿತ್ತು.
ಜನಾಕ್ರೋಶಕ್ಕೆ ಎಚ್ಚೆತ್ತ ಸರ್ಕಾರ: ಯಾರೊಬ್ಬರ BPL ಕಾರ್ಡ್ ರದ್ದು ಮಾಡದಂತೆ ಸಿಎಂ ಖಡಕ್ ಆದೇಶ!
ಮುನಿಕುಮಾರ್ ಎಂಬ ರೈತ ಜೋಳ ಬೆಳೆಯಲಾಗಿದ್ದ ಹೊಲದಲ್ಲಿನ ಬದುವಿನಲ್ಲಿ ಅರಸುರಾಜು ಎಂಬುವವರು ಹುಲ್ಲು ಕೊಯ್ಲು ಮಾಡುವ ವೇಳೆ ಹೆಬ್ಬಾವು ಕಂಡುಬಂದಿದೆ.
ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಉರಗ ತಜ್ಞ ಪ್ರಶಾಂತ್ ಅವರನ್ನು ಸ್ಥಳಕ್ಕೆ ಕರೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ಇನ್ನೂ ಕುರುಚಿಲು ಅರಣ್ಯದಲ್ಲಿನ ಕಲ್ಲುಗಳ ನಡುವೆ ಈ ಹೆಬ್ಬಾವು ಹೆಚ್ಚಾಗಿ ವಾಸ ಮಾಡುತ್ತವೆ.
ಈಗ ರಕ್ಷಣೆ ಮಾಡಲಾಗಿರುವ ಹೆಣ್ಣು ಹೆಬ್ಬಾವು 7 ಅಡಿಯಷ್ಟು ಉದ್ದ ಹಾಗೂ 20 ಕೆ.ಜಿ ತೂಕ ಇದೆ. ಮೊಲ ಅಥವಾ ಕುರಿ, ಮೇಕೆ ಮತ್ಯಾವುದಾದರು ಸಣ್ಣ ಪ್ರಾಣಿಯನ್ನು ನುಂಗಿರಬಹುದು ಎಂದು ರೈತರು ಸಂಶಯ ವ್ಯಕ್ತಪಡಿಸಿದ್ದಾರೆ…