ಹಾವೇರಿ:- ದೇವರ ಕೋಣ ನಾಪತ್ತೆಯಾದ ಹಿನ್ನೆಲೆ ಹಾವೇರಿ ಜನ ಪೊಲೀಸರ ಮೊರೆ ಹೋಗಿದ್ದಾರೆ.
ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಕರಿ ಗ್ರಾಮದ ದುರ್ಗಾದೇವಿಯ 4 ವರ್ಷದ ದೇವರ ಕೋಣ ಕಾಣೆಯಾಗಿದೆ. ಕಳೆದ ಎರಡು-ಮೂರು ತಿಂಗಳ ಹಿಂದೆಯೇ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ಮಾಡಿದ್ದಾರೆ. ಅದರೂ ಸಹ ದೇವರ ಕೋಣ ಸಿಕ್ಕಿಲ್ಲ.
ಗ್ರಾಮದ ಆರಾಧ್ಯದೈವ ಗ್ರಾಮದ ದೇವಿಯ ಕೋಣ ಗ್ರಾಮದಲ್ಲಿಯೇ ಓಡಾಡುಕೊಂಡು ಇರಬೇಕು. ಅದು ಗ್ರಾಮದಲ್ಲಿಯೇ ಇದ್ದರೆ ಗ್ರಾಮದಲ್ಲಿ ಜನರಿಗೆ ಹಾಗೂ ಗ್ರಾಮಕ್ಕೆ ಒಳಿತು ಆಗುತ್ತೆ ಅನ್ನೋ ನಂಬಿಕೆ ಗ್ರಾಮದ ಜನರದ್ದು, ಹೀಗಾಗಿ ಕೋಣ ಹುಡುಕಾಟ ನಡೆಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿಯ ಹೆಸರಿನಲ್ಲಿ ಕೋಣವನ್ನ ಬಿಡಲಾಯಿತ್ತು. ಗ್ರಾಮದಲ್ಲಿಯೇ ಕೋಣ ಓಡಾಡಿಕೊಂಡು ಮೇವು ತಿಂದುಕೊಂಡು ಇತ್ತು. ಈಗ ಕಳೆದ ಎರಡು ತಿಂಗಳಿನಿಂದ ಕೋಣ ಕಾಣುತ್ತಿಲ್ಲ. ದೇವಿಯ ಟ್ರಸ್ಟ್ ಸಿಬ್ಬಂದಿ ಹಾಗೂ ಗ್ರಾಮದ ಜನರು ಹುಡುಕಾಟ ನಡೆಸಿದ್ದಾರೆ. ಅದರೂ ಕೋಣ ಮಾತ್ರ ಸಿಕ್ಕಿಲ್ಲ. ಹೀಗಾಗಿ ದೇವರ ಕೋಣ ಹುಡುಕಿಕೊಡುವಂತೆ ಪೊಲೀಸರಿಗೆ ರಟ್ಟಿಹಳ್ಳಿ ಗ್ರಾಮದ ಜನರು ಮನವಿ ಮಾಡಿಕೊಂಡಿದ್ದಾರೆ.