ಮಂಡ್ಯ: ರೈತರ ಪರ ಎನ್ನುವ ದೇವೇಗೌಡರು ನಬಾರ್ಡ್ ಮೊತ್ತ ಇಳಿಕೆ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಎನ್ ಡಿಎ ರೈತರ ಪರ ಅಂತ ಹೇಳುತ್ತಾರೆ. ರಾಜ್ಯದ ಅಭಿವೃದ್ಧಿ, ಜನಪರವಾದ ಕಾರ್ಯಕ್ರಮ ಮಾಡಿಲ್ಲ. ಅವರು ಐದು ಗ್ಯಾರಂಟಿಗೆ ಸರಿಸಮಾನವಾದ ಒಂದು ಕಾರ್ಯಕ್ರಮ ಕೊಟ್ಟರೇ ನಾವು ಒಪ್ಪುತ್ತೇವೆ. ಕೇಂದ್ರದಿಂದ ಅಕ್ಕಿ ಕೊಡದೇ ರಾಜಕಾರಣ ಮಾಡಿದರು ಎಂದು ಕಿಡಿಕಾರಿದರು. ನಬಾರ್ಡ್ ನಿಂದ 2340 ಕೋಟಿ ಅನುದಾನ ಕೊಟ್ಟಿದ್ದಾರೆ. ಇದು ರೈತರ ಮೇಲೆ ಎಫೆಕ್ಟ್ ಆಗುತ್ತದೆ. ಅನುದಾನವನ್ನು 58 ಪರ್ಸೆಂಟ್ ಇಳಿಸಿದ್ದಾರೆ. ಕುಮಾರಸ್ವಾಮಿ ಬಿಡಿ ಹೇಗೆ ಬೇಕೊ ಹಾಗೇ ಮಾತನಾಡುತ್ತಾರೆ. ದೇವೇಗೌಡರು ಮೋದಿ ವಿರುದ್ಧ ಯಾಕೆ ಮಾತನಾಡುತ್ತಿಲ್ಲ. ರೈತರ ಪರ ಅನ್ನುವವರು ನಬಾರ್ಡ್ ನಿಂದ ಇಷ್ಟು ಹಣ ಕಡಿಮೆ ಬಂದಿದೆ ಎಂದು ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಸುಮಲತಾ ಅವರು ಎಂಪಿಯಾಗಿ ಐದು ವರ್ಷ ಬಹಳ ಕೆಲಸ ಮಾಡಿದ್ದಾರೆ. ಇದೀಗ ಹೋರಾಟ ಮಾಡಲಿ, ಹೋರಾಟ ಮಾಡದೇ ಇದ್ದರೇ ಹೇಗೆ ಸ್ಥಾನಮಾನ ಸಿಗುತ್ತದೆ ಎಂದು ಸುಮಲತಾ ಅಂಬರೀಶ್ ಬಗ್ಗೆ ವ್ಯಂಗ್ಯವಾಡಿದರು.
ಶಿಗ್ಗಾಂವಿ ಉಪಕದನ ಫಲಿತಾಂಶಕ್ಕೆ ಕೌಂಟ್ ಡೌನ್ – ಅಭ್ಯರ್ಥಿಗಳ ಎದೆಯಲ್ಲಿ ಢವ..ಢವ..
ಇನ್ನೂ ಪಡಿತರ ಕಾರ್ಡ್ ಬಗ್ಗೆ ಈಗಾಗಲೇ ಸಿಎಂ ತಿಳಿಸಿದ್ದಾರೆ. ನಾವು ವಿಶೇಷವಾದ ತೀರ್ಮಾನ ತೆಗೆದುಕೊಂಡು ಕಾರ್ಡ್ ರದ್ದು ಮಾಡಿಲ್ಲ. ನಾವು ಜನರ ಪರ ಇದ್ದೇವೆ. ಬಿಜೆಪಿಯವರದ್ದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಎಂದರು. ಬಿಜೆಪಿ ಅವರ ಕಾಲದಲ್ಲೇ ವಕ್ಫ್ ಖಾತೆ ಬದಲಾವಣೆ ಆಗಿದೆ. ಅವರು ಕಾಲದಲ್ಲಿ ನಿರ್ದೇಶನದ ಮೇರೆಗೆ ಖಾತೆ ಬದಲಾವಣೆ ಆಗಿದೆ. ರೈತರಿಗೆ ಅನ್ಯಾಯವಾಗಿರೋದು ಬಿಜೆಪಿ ಆಡಳಿತದ ಸಂದರ್ಭದಲ್ಲಿ ಎಂದು ತಿರುಗೇಟು ನೀಡಿದರು.