ಗದಗ:- ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಮಹಿಳೆಯೋರ್ವರು ಆಕ್ರೋಶ ಹೊರ ಹಾಕಿದ್ದಾರೆ.
ನೇಹಾ ಹತ್ಯೆ ಕೇಸ್: ತನಿಖೆಗೂ ಮೊದಲೇ ಫ್ರೀ ಜಡ್ಜ್ ಮೆಂಟ್ – ಸಚಿವ ಜೋಶಿ ಆಕ್ರೋಶ!
ನೆನ್ನೆ ಗದಗನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಹತ್ಯೆಗೆ ಈಡಾಗಿದ್ರು. ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ, ನಗರಸಭೆ ಹಾಲಿ ಉಪಾಧ್ಯಕ್ಷೆ ಸುನಂದ ಬಾಕಳೆ ದಂಪತಿ ಪುತ್ರ ಕಾರ್ತಿಕ್ ಬಾಕಳೆ ಸೇರಿ ನಾಲ್ವರ ಹತ್ಯೆ ಮಾಡಲಾಗಿದೆ. 27 ವರ್ಷದ ಕಾರ್ತಿಕ್ ಬಾಕಳೆ, ಅವ್ರ ಸಂಬಂಧಿಕರಾದ 58 ವರ್ಷದ ಪರಶುರಾಮ, 50 ವರ್ಷದ ಲಕ್ಷ್ಮಿ ಹಾಗೂ 17 ವರ್ಷದ ಆಕಾಂಕ್ಷಾ ಮೃತರು. ಬಾಕಳೆ ಕುಟುಂಬಕ್ಕೆ ಸಾಂತ್ವಾನ ಹೇಳಲು ಮಾಜಿ ಸಿಎಂ ಬೊಮ್ಮಾಯಿ, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮಿಸಿದ್ದ ವೇಳೆ ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ.
ಕಾನೂನು ಸರಿ ಇಲ್ಲ, ವ್ಯವಸ್ಥೆ ಸರಿ ಇಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ಈ ವೇಳೆ ಆಕ್ರೋಶಗೊಂಡ ಸಂಬಂಧಿ ಅನ್ನಪೂರ್ಣ ಮಾತಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿಯೂ ಯೋಗಿ ಅಂತಹವರೇ ಬರಬೇಕು ಎಂದು ಮಹಿಳೆ ಹೇಳಿದ್ದಾರೆ.