ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲೆಲ್ಲೂ ಸಂಭ್ರಮ.ಹೀಗಾಗಿ ಎಲ್ಲಡೆ ಬೆಳಕಿನ ಹಬ್ಬವನ್ನ ಈ ಬಾರಿ ಭರ್ಜರಿಯಾಗಿ ಹಬ್ಬ ಮಾಡಿರೋ ಜನ, ಇವತ್ತು ಖರೀದಿಗಾಗಿ ಮಾರುಕಟ್ಟೆಗೆ ಮುಗಿಬಿದ್ದಿದ್ದರು. ಭರ್ಜರಿ ಶಾಪಿಂಗ್ ಮಾಡೋ ಮೂಲಕ ಬೆಳಕಿನ ಹಬ್ಬವನ್ನ ಆಚರಿಸಿ ಸಂಭ್ರಮಿಸಿದ್ದಾರೆ.ಹಾಗಾದ್ರೆ ಬೆಳಗ್ಗೆಯಿಂದ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೇಗಿತ್ತು ಬನ್ನಿ ನೋಡಿಕೊಂಡು ಬರೋಣ
ಮಾಜಿ ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
ಹೂವು, ಖರೀದಿಗೆ ಮುಗಿಬಿದ್ದಿರುವ ಗ್ರಾಹಕರು, ಬಾಳೆಕಂದು, ಬೂದುಕುಂಬಳಕಾಯಿ ಮುಂದೆಯೂ ಜನರ ದಂಡೇ ಕಾಣ್ತಿತ್ತು. ಹಣ್ಣುಗಳ ಮುಂದೆ ಜನರ ಗುಂಪೇ ನಿಂತಿತ್ತು. ಕಣ್ಣು ಹಾಯಿಸಿದಷ್ಟು ಜನವೋ ಜನ..ಇದು ಇಂದು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆ ಆರ್ ಮಾರುಕಟ್ಟೆ ಯಲ್ಲಿ ಜನಜಾತ್ರೆಯೇ ಕಂಡು ಬಂತು..
ಹೌದು..ಇಂದು ನಾಡಿನಲ್ಲಡೆ ದೀಪಾವಳಿ ಹಬ್ಬದ ಸಂಭ್ರಮ,ಎಲ್ಲಡೆ ಬೆಳಕಿನ ಹಬ್ಬವನ್ನ ಸಂಭ್ರಮದಿಂದ ಜನ ಆಚರಣೆ ಮಾಡ್ತಿದ್ದಾರೆ.ಇಂದು ನರಕ ಚುತುರ್ಥಿ ನಾಳೆ ಧನಲಕ್ಷ್ಮಿ ಪೂಜೆ ಹಿನ್ನಲೆ ನಗರದ ಮಾರುಕಟ್ಟೆಗಳಿಗೆ ಜನ ಬೆಳಗ್ಗೆ 5 ಗಂಟೆಯಿಂದ್ಲೇ ದಾಂಗುಡಿ ಇಟ್ಟು, ಹಬ್ಬಕ್ಕೆ ಬೇಕಾದ ಹೂ, ಹಣ್ಣು ಬಾಳೆಕಂದು, ಬೂದುಕುಂಬಳಕಾಯಿ ಖರೀದಿಗೆ ಜನ ಮುಗಿಬಿದ್ದರು. ಆದ್ರಲ್ಲೂ ಕೆಆರ್ ಮಾರುಕಟ್ಟೆ ಯಲ್ಲಿ ಇಂದು ಬೆಳಗ್ಗೆಯಿಂದ ಜನರಿಂದಲ್ಲೇ ತುಂಬಿ ಗಿಜಿ ಗಿಜಿ ಅಂತಿತ್ತು. ಹೂ ಬಾಳೆಕಂದು ಬೂದುಕುಂಬಳಕಾಯಿ ದರ ಹೆಚ್ಚಿದ್ರೂ ಖುಷಿ ಮುಂದೆ ಅದು ಎದ್ದು ಕಂಡಿಲ್ಲ. ಬೆಲೆ ಏರಿಕೆ ನಡುವೆಯೂ ಹಬ್ಬ ಬಿಡೋಕೆ ಆಗೊಲ್ಲ ಅಂತ ಹಬ್ಬಕ್ಕೆ ಬೇಕಾದ ವಸ್ತುಗಳನ್ನ ಖರೀದಿ ಮಾಡಿ ಹಬ್ಬ ಆಚರಿಸಿದರು.
ಇನ್ನೂ ನಿನ್ನೆ ಇದ್ದ ದರಕ್ಕೂ ಇಂದಿನ ದರಕ್ಕೂ ಬಾರೀ ವ್ಯತ್ಯಾಸ ಕಂಡು ಬಂದಿತ್ತು. ಕೆಲವೊಂದಷ್ಟು ಜನ ಕಡಿಮೆ ಪ್ರಮಾಣದಲ್ಲಿ ಹಬ್ಬದ ಸಾಮಾಗ್ರಿಗಳನ್ನು ಖರೀದಿ ಮಾಡ್ಕೊಂಡು ಹೋದ್ರೆ, ಮತ್ತೆ ಕೆಲವರು ಹಬ್ಬ ವರ್ಷಕ್ಕೆ ಬರೋದು ಒಂದೇ ದಿನ ವಿಧಿಯಿಲ್ಲದೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಹಾಗಾದ್ರೆ, ಹೂವು, ಹಣ್ಣು ಹಾಗೂ ಹಬ್ಬದ ದರ ಎಷ್ಟಾಗಿದೆ ಅಂತ ನೋಡೋದಾದ್ರೆ,
ಯಾವ ಯಾವ ಹೂವು ಎಷ್ಟೆಷ್ಟು ದರ ?
– ಮಲ್ಲಿಗೆ ಕೆ.ಜಿ. 1200 ರೂ.
– ಕನಕಾಂಬರ ಕೆ.ಜಿ 1000 -1200 ರೂ.
– ಸೇವಂತಿಗೆ ಕೆ.ಜಿ 300 – 400 ರೂ.
– ಗುಲಾಬಿ ಕೆ.ಜಿ 300- 350 ರೂ.
– ಸುಗಂಧರಾಜ ಕೆ.ಜಿ 250- 300 ರೂ.
– ಚೆಂಡು ಹೂವು ಕೆ.ಜಿ 150-180 ರೂ.
ಹಣ್ಣಿನ ರೇಟ್ ಎಷ್ಟಿದೆ?
– ಸೇಬು ಕೆ.ಜಿ 120-140 ರೂ.
– ದಾಳಿಂಬೆ ಕೆ.ಜಿ 150-170 ರೂ.
– ಮೂಸಂಬಿ ಕೆ.ಜಿ 100 ರೂ.
– ಆರೆಂಜ್ ಕೆ.ಜಿ 110 ರೂ.
– ಸಪೋಟ ಕೆ.ಜಿ 80 ರೂ.
– ಸೀಬೆಹಣ್ಣು ಕೆ.ಜಿ 140 ರೂ.
– ಏಲಕ್ಕಿ ಬಾಳೆಹಣ್ಣು ಕೆ.ಜಿ 80 ರೂ.
ಹಬ್ಬದ ಇತರೆ ಸಾಮಾಗ್ರಿಗಳ ದರ ಎಷ್ಟಿದೆ?
– ಮಾವಿನ ಎಲೆ 30- 40 ಒಂದು ಕಟ್ಟು
– ಬಾಳೇಕಂದು ಒಂದು ಜೊತೆ 50 ರೂ.
– ಬೂದಕುಂಬಳಕಾಯಿ ಕೆ.ಜಿ 50 ರೂ.
– ತುಳಸಿ ಒಂದು ಮಾರಿಗೆ 60 ರೂ.
ಇನ್ನೂ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಇತ್ತು. ಕಳೆದ ಎರಡು ವರ್ಷದ ಹಿಂದೆ ಕೊರೊನಾ ಅಂತ ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿ ಇದ್ದೇವು. ಆದರೆ ಈ ಬಾರಿ ಭರ್ಜರಿ ವ್ಯಾಪಾರ ಆಗಿದೆ ಎಂದು ಸಂತಸ ಪಟ್ಟರು.
ಒಟ್ಟಿನಲ್ಲಿ ಇಂದು ಬೆಳಕಿನ ಹಬ್ಬ ದೀಪಾವಳಿಗೆ ಭರ್ಜರಿ ವ್ಯಾಪಾರ ಮಾರುಕಟ್ಟೆಗಳಲ್ಲಿ ನಡೀತು. ಅದ್ದೂರಿ ಆಚರಣೆಗೆ ಮೂಲಕ ಜನ ಸಂಭ್ರಮಿಸಿ, ಖುಷಿ ಪಟ್ಟಿದ್ದಾರೆ…ಇನ್ನೂ ನಾಳೆ ನಾಡಿದ್ದು ಸಹ ಹಬ್ಬ ಇರೋ ಕಾರಣದಿಂದ ಮಾರುಕಟ್ಟೆಗಳಲ್ಲಿ ಮತ್ತಷ್ಟು ಖರೀದಿ ಭರಾಟೆ ಜೋರಾಗಿ ಇರಲಿದೆ ಅನ್ನ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು