ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆದರೆ ಇನ್ನೂ ಯಾವ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ಹಾಲಿ ಸಂಸದರು ಹಾಗೂ ಟಿಕೆಟ್ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ. ಅತ್ತ ಹಾಸನದಲ್ಲಿ ಇನ್ನೂ ಯಾರು ಅಭ್ಯರ್ಥಿ ಎಂಬುದೇ ಘೋಷಣೆ ಆಗಿಲ್ಲ. ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಜೆಡಿಎಸ್ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್ ಆಗಿದ್ದಾರೆ.
ಹಾಸನ ಹಾಗೂ ಮಂಡ್ಯ (Hassan- Mandya) ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ ಬೇಕೇಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ (Preetham Gowda) ಪದೇಪದೇ ಒತ್ತಾಯಿಸುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಟಿಕೆಟ್ ನೀಡದಂತೆ ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು (HD Devegowda) ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ.
ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದಂತೆ! – ಕಾರಣ ಏನು ಗೊತ್ತಾ!?
ಇದಲ್ಲದೇ ಕಳೆದ ಮೂರು ದಿನಗಳಿಂದ ಕಡೆಯ ದಿಶಾ ಸಭೆ ನಡೆಸಿದ ಪ್ರಜ್ವಲ್, ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಡೆಯುತ್ತಿರುವ ಕಾಮಗಾರಿಗಳ ವೇಗ ಹೆಚ್ಚಿಸುವಂತೆ ಸೂಚನೆ ನೀಡಿದರು. ಎಲ್ಲಾ ತರದಲ್ಲೂ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದೀರಾ, ಐದು ವರ್ಷಗಳ ಕಾಲ ಅಧಿಕಾರಿಗಳು ಸಹಕರಿಸಿದ್ದೀರಾ ನಾನು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೆ, ದಿಶಾ ಸಭೆಯಲ್ಲಿ ಸರಿಯಾದ ನಡವಳಿಕೆ ನಡೆದುಕೊಂಡಿಲ್ಲ ಎಂದರೆ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದರು.