ಮಂಡ್ಯ :- ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ವಿವಾದದ ನಡುವೆಯೂ ಬಾಡೂಟವನ್ನು ಹಂಚಿಕೆ ಮಾಡಲಾಗಿದೆ. ಹೀಗೆ ಹಂಚಿಕೆ ಮಾಡುತ್ತಿದ್ದಂತ ಆಹಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊನೆಗೂ ಬಾಡೂಟ ಹಂಚಿಕೆ ಮಾಡಲಾಗಿದೆ.
ಪ್ರಗತಿಪರರಿಂದ ಮೊಟ್ಟೆ, ಕೋಳಿ ಸಾರು ಹಾಗೂ ರಾಗಿ ಮುದ್ದೆಯನ್ನು ಹಂಚಿಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನದ ಸಾರ್ವಜನಿಕರಿಗೆ ನೀಡುವ ಊಟದ ಕೌಂಟರ್ ಬಳಿಯಲ್ಲೇ ಬಾಡೂಟವನ್ನು ಸಾರ್ವಜನಿಕರಿಗೆ ಪ್ರಗತಿ ಪರರಿಂದ ಹಂಚಿಕೆ ಮಾಡಿ, ಬಡಿಸಲಾಯಿತು.
PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ..! ಈಗಲೇ ಅರ್ಜಿ ಸಲ್ಲಿಸಿ
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಹಾಗೂ ಪ್ರಗತಿಪರರ ನಡುವೆ ವಾಗ್ವಾದ ಕೂಡ ನಡೆಯಿತು. ಪೊಲೀಸರು ಹಾಗೂ ಪ್ರಗತಿಪರರ ನಡುವೆ ಜಟಾಪಟಿಯ ನಡುವೆಯೂ ಕೊನೆಗೂ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದ್ದಂತ ಬಾಡೂಟವನ್ನು ವಶಕ್ಕೆ ಪಡಿಸಿಕೊಂಡರು.
ವರದಿ : ಗಿರೀಶ್ ರಾಜ್ ಮಂಡ್ಯ