ಹಾವೇರಿ: ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಮತ್ತು ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಬ್ಬರನ್ನೂ ಬಂಧಿಸಬೇಕು ಎಂದು ಮಾಜಿ ಉಪಮುಖ್ಮಂತ್ರಿ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಬ್ಬರನ್ನು ಬಂಧಿಸಿದರೆ ಅವರು ಬಾಯಿ ಬಿಡುತ್ತಾರೆ. ಯಾರು ಯಾರ ಹೆಸರಿನಲ್ಲಿ ಎಷ್ಟೆಷ್ಟು ಸಂಗ್ರಹ ಮಾಡಿದ್ದಾರೆ ಎಂಬುದು ತಿಳಿಯುತ್ತೆ ಎಂದು ಈಶ್ವರಪ್ಪ ಕುಟುಕಿದರು.
https://ainlivenews.com/suprem-ray-healing-center-reiki/
ಡಿಸಿಎಂ ಡಿಕೆ ಶಿವಕುಮಾರಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಕೆಂಪಣ್ಣ ನೇರವಾಗಿ ಆರೋಪ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕೆಗಳಲ್ಲಿ ವರದಿ ಸಹ ಆಗಿದೆ. ಇದಕ್ಕಿಂತ ಬೇರೆ ದಾಖಲಾತಿಗಳು ಬೇಕೆ ಎಂದು ಪ್ರಶ್ನಿಸಿದರು. ಇವರಿಬ್ಬರನ್ನು ಬಂಧಿಸಿದರೆ ಭ್ರಷ್ಟಾಚಾರದಲ್ಲಿ ಯಾರು ಯಾರು ಇದ್ದಾರೆ ಎಂಬುದು ತಿಳಿಯಲಿದೆ ಎಂದು ಈಶ್ವರಪ್ಪ ಆಗ್ರಹಿಸಿದರು. ಕೆಂಪಣ್ಣ ಮುನಿರತ್ನ ಮೇಲೆ ಆರೋಪ ಮಾಡಿದ ವೇಳೆ ಮುನಿರತ್ನ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿ ಕೆಂಪಣ್ಣ ಬಹಿರಂಗವಾಗಿ ಅಧಿಕಾರಿ ಮತ್ತು ಡಿಸಿಎಂ ಶಿವಕುಮಾರ್ ಹೆಸರಿನಲ್ಲಿ ಬಹಿರಂಗ ಮಾಡಿರುವುದರಿಂದ ತನಿಖೆ ಮಾಡಿ ಎಂದು ಈಶ್ವರಪ್ಪ ಒತ್ತಾಯಿಸಿದರು.