ಬೆಂಗಳೂರು:- ಬೇತಮಂಗಲ ಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದ ಇಬ್ಬರು ಯುವಕರನ್ನು ಅರೆಸ್ಟ್ ಮಾಡಲಾಗಿದೆ
ಶ್ರೀರಾಮನ ಮತ್ತು ಗುಂಬಜ್ ಫೋಟೋ ಹಾಕಿ ಅಶ್ಲೀಲವಾಗಿ ಕಮೆಂಟ್ ಮಾಡಿ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳನ್ನು ಪೊಲೀಸರಿಗೆ ಹಿಂದೂ ಸಂಘಟನೆ ಮುಖಂಡರು ಒಪ್ಪಿಸಿದ್ದಾರೆ. ಹಿಂದೂ ಪರ ಸಂಘಟನೆ ಕಾರ್ಯಕರ್ತರ ದೂರಿನ ಮೇರೆಗೆ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.
ಮುಳಬಾಗಿಲಿನಲ್ಲಿ ಕೆಲ ಕಿಡಿಗೇಡಿಗಳು ಮರ್ಯಾದಾ ಪುರುಷೋತ್ತಮನ ಕಟೌಟ್ ಮತ್ತು ಫ್ಲೆಕ್ಸ್ಗಳನ್ನ ಹರಿದು ಹಾಕಿದ್ದರು. ಜನವರಿ 21ರಂದು ನಗರದಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಅದಕ್ಕಾಗಿ ನಗರದ ಹಲವೆಡೆ ಶ್ರೀರಾಮನ ಫ್ಲೆಕ್ಸ್ ಹಾಕಲಾಗಿತ್ತು