ಚೆನ್ನೈ:- ಟುಟಿಕೋರಿನ್ ಪೊಲೀಸರು ಕಾರ್ಯಚರಣೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಚಿವ ಅನಿತ ಆರ್ ರಾಧಾಕೃಷ್ಣನ್ ವಿರುದ್ಧ FIR ದಾಖಲಿಸಿದ್ದಾರೆ.
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕೆ.ಕಾಮರಾಜ್ ಅವರ ಹೆಸರು ಉಲ್ಲೇಖಿಸಿದ್ದರು. ಹಿಂದಿನ ಮದ್ರಾಸ್ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆ ಕಾಮರಾಜ್, ತಮಿಳುನಾಡಿನ ಕಾಂಗ್ರೆಸ್ ಐಕಾನ್ ಆಗಿದ್ದರು. ಮೋದಿ ವಿರುದ್ಧ ಗುಡುಗಿದ ಸಚಿವರು,”ಕಾಮರಾಜ್ ಅವರು ಮಲಗಿದ್ದಾಗ ಅವರನ್ನು ಕೊಲ್ಲಲು ಬಯಸಿದವರು ನೀವು ಅಲ್ಲವೇ” ಎಂದು ಹೇಳಿರುವುದು ವಿಡಿಯೊದಲ್ಲಿದೆ.
ಬಿಜೆಪಿ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನಾವು 294B (ಸಾರ್ವಜನಿಕವಾಗಿ ಅಶ್ಲೀಲ ಪದಗಳನ್ನು ಬಳಸುವುದು) ಅಡಿಯಲ್ಲಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಮೇಘನಪುರಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.