ಬೆಂಗಳೂರು:- ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಅಪಮಾನವಾಗುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯೊಂದನ್ನು ನೀಡಿದ್ದ ನಟ ಚೇತನ್ ಕುಮಾರ್ ವಿರುದ್ಧ ಎನ್ಸಿಆರ್ ದಾಖಲಾಗಿದೆ.
ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ವಕೀಲ ಆರ್ ಎಲ್ ಎನ್ ಮೂರ್ತಿ ಅವರು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದು ಎನ್ ಸಿಆರ್ ದಾಖಲಿಸಿಕೊಂಡಿದ್ದಾರೆ ಪೊಲೀಸರು.
ಇನ್ನೂ ಸಾಮಾಜಿಕ ಆಗುಹೋಗುಗಳ ಬಗ್ಗೆ ವಿಭಿನ್ನ ರೀತಿಯಲ್ಲಿ ಪೋಸ್ಟ್ ಹಾಕುವ ಚೇತನ್ ಅವರ ಹೇಳಿಕೆಗಳು ಪ್ರತಿ ಬಾರಿಯೂ ವಿವಾದಕ್ಕೆ ಕಾರಣವಾಗುತ್ತವೆ. ಅಂತೆಯೇ ಈ ಬಾರಿ ಅವರು ಟಿಪ್ಪು ಸುಲ್ತಾನ್ ಹಾಗೂ ಕೆಂಪೇಗೌಡರ ನಡುವೆ ಹೋಲಿಕೆ ಮಾಡಿ ಟ್ವೀಟ್ ಹಾಕಿದ್ದರು.