ಬೆಂಗಳೂರು:- ಎಕ್ಸ್ನಲ್ಲಿ ಸಚಿವ ಜಾರ್ಜ್ ಬಗ್ಗೆ ಅವಹೇಳನ ಪೋಸ್ಟ್ ಮಾಡಿದ ಆರೋಪದಡಿ ಬಿಆರ್ಎಸ್ ಪಕ್ಷದ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ.
ಕರೀಂ ನಗರದ ರವಿಕಾಂತಿ ಶರ್ಮಾ ಬಂಧಿತ ನಾಗಿದ್ದು, ಬಳಿಕ ಬಿಡುಗಡೆಗೊಳಿಸಿ ದ್ದಾರೆ. ಇತ್ತೀಚಿಗೆ ಮುಗಿದ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಸಚಿವರ ಕುರಿತು ಆರೋಪಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ. ತೆಲಂಗಾಣದ ಬಿಆರ್ಎಸ್ ಪಕ್ಷದಲ್ಲಿ ರವಿಕಾಂತಿ ಸಕ್ರಿಯ ಕಾರ್ಯ ಕರ್ತನಾಗಿದ್ದು, ಪಕ್ಷದ ಐಟಿ ಸೆಲ್ನಲ್ಲಿ ಆತ ಕೆಲಸ ಮಾ ಡುತ್ತಿದ್ದ. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಹಾಗೂ ಗೃಹಜ್ಯೋತಿ ಯೋಜನೆ ಅನುಷ್ಠಾನದ ಕುರಿತು ‘ಎಕ್ಸ್ ‘ನಲ್ಲಿ ಇಂಧನ ಸಚಿವರ ನಕಲಿ ಆಡಿಯೋ ತುಣುಕನ್ನು ಆತ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.