ವಿಜಯನಗರ :ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಂಬುನಾಥ ಹಳ್ಳಿ ಆದರ್ಶ ವಿಶ್ವವಿದ್ಯಾಲಯ ಹತ್ತಿರ ಅಲ್ಪಸಂಖ್ಯಾತರ ಮೌಲನಾ ಆಜಾದ್ ಮಾದರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಪಿಯುಸಿ ೧೧ನೇ ತರಗತಿಗೆ (ಪಿಸಿಎಂಬಿ ವಿಜ್ಞಾನ ವಿಭಾಗ) ಉಚಿತ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೌಲನಾ ಆಜಾದ್ ಮಾದರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮಂಜುನಾಥ್ ಪಾಟೇಲ್ ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನಾಂಕವಾಗಿದೆ. ಅಲ್ಪಸಂಖ್ಯಾತರ ಸಮುದಾಯಕ್ಕೆ ಶೇ.೭೫ ಮತ್ತು ಇತರೆ ಸಮುದಾಯಕ್ಕೆ ಶೇ.೨೫ ರಷ್ಟು ಮೀಸಲಾತಿ ಇರುತ್ತದೆ.
ಆಸಕ್ತಿಯುಳ್ಳ ವಿದ್ಯಾರ್ಥಿಗಳು ಮತ್ತು ಪಾಲಕರುಗಳು ಕಾಲೇಜಿಗೆ ಭೇಟಿ ನೀಡಿ, ಅರ್ಜಿ ಪಡೆದು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ತಾಲ್ಲೂಕು ಮಾಹಿತಿ ಕೇಂದ್ರಗಳಿಂದ ಪಡೆಯಬಹುದು.
ಮಾಹಿತಿಗಾಗಿ ನಗರದ ಜಂಬುನಾಥ ಹಳ್ಳಿ ಆದರ್ಶ ವಿಶ್ವವಿದ್ಯಾಲಯ ಹತ್ತಿರ ಅಲ್ಪಸಂಖ್ಯಾತರ ಮೌಲನಾ ಆಜಾದ್ ಮಾದರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಕಚೇರಿ ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9964732718.9945951963,.9632989157,ಸಂಪರ್ಕಿಸಬಹುದು.