ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಜೋರಾಗಿದೆ. ಅದರಂತೆ ಇಂದು ಒಂದೇ ದಿನ 175 ಕೇಸ್ ಗಳು ಪತ್ತೆಯಾಗಿದೆ.
ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೋಗೋ ಮುನ್ನ ಹುಷಾರ್: ಚಿಕಿತ್ಸೆ ಬಳಿಕ ದೃಷ್ಟಿ ಕಳೆದುಕೊಂಡ 16 ರೋಗಿಗಳು!
ಒಟ್ಟಾರೆ ರಾಜ್ಯದಲ್ಲಿ 352 ಸಕ್ರಿಯ ಡೆಂಗ್ಯೂ ಪ್ರಕರಣಗಳು ಇವೆ. ಡೆಂಗ್ಯೂ ಸೋಂಕಿನಿಂದ ಜನವರಿಯಿಂದ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 753 ಮಂದಿಗೆ ಡೆಂಗ್ಯೂ ಟೆಸ್ಟ್ ನಡೆಸಿದ್ದು, ಈ ಪೈಕಿ 175 ಮಂದಿಗೆ ಸೋಂಕು ದೃಢವಾಗಿದೆ. ಜಿಲ್ಲಾವಾರು ನೋಡುವುದಾದರೆ ಬೆಂಗಳೂರಿನಲ್ಲಿ 115, ಬೆಂಗಳೂರು ಗ್ರಾಮಾಂತರ 2, ವಿಜಯಪುರ 9, ಗದಗ 8, ಉತ್ತರ ಕನ್ನಡ 1, ಬಳ್ಳಾರಿ 1, ಮಂಡ್ಯ 26, ಉಡುಪಿ 2, ಕೊಡಗು ಜಿಲ್ಲೆಯಲ್ಲಿ 11 ಪ್ರಕರಣ ಪತ್ತೆಯಾಗಿವೆ. ಸದ್ಯ ಇರುವ 325 ಸಕ್ರಿಯ ಪ್ರಕರಣಗಳ ಪೈಕಿ 45 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 7,006 ಡೆಂಗ್ಯೂ ಕೇಸ್ಗಳು ವರದಿಯಾಗಿದ್ದು, ಒಟ್ಟು 6 ಮಂದಿ ಮೃತಪಟ್ಟಿದ್ದಾರೆ