ಬಳ್ಳಾರಿ:- ರಸ್ತೆ ಅಗಲೀಕರಣಕ್ಕಾಗಿ 70ಕ್ಕೂ ಹೆಚ್ಚು ಮನೆಗಳ ನೆಲಸಮ ಮಾಡಿದ್ದು, ನೋಟಿಸ್ ನೀಡದೆ ತೆರವು ಆರೋಪ ಕೇಳಿ ಬಂದಿದೆ.
ಈ ದಿನಾಂಕದಂದು ಜನಿಸಿದವರು ಲಕ್ಷ್ಮಿಗೆ ಬಲು ಇಷ್ಟ, ಜೀವನಪೂರ್ತಿ ರಾಜರಂತೆ ಬದುಕುತ್ತಾರೆ!
ಬಾಪೂಜಿ ನಗರದ ಬಡಾವಣೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳನ್ನು ರಸ್ತೆ ಅಗಲೀಕರಣದ ನೆಪ ಹೇಳಿ ಯಾವುದೇ ನೋಟಿಸ್ ಕೊಡದೆ ಮಹಾನಗರ ಪಾಲಿಕೆ ತೆರವುಗೊಳಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮನೆ ಕಳೆದುಕೊಂಡವರು ಬಹುತೇಕ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವಂತವರು. ರಸ್ತೆ ಪಕ್ಕದಲ್ಲಿ ಸಣ್ಣಪುಟ್ಟ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಇವರಿಗೆ ಮನೆ ಪತ್ರಗಳನ್ನು ಸಹ ನೀಡಿದೆ. ಹೀಗಿದ್ದಾಗ ಏಕಾಏಕಿ ಯಾವುದೇ ನೋಟಿಸ್ ಕೊಡದೆ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಜನ ಆರೋಪಿಸಿದ್ದಾರೆ.