ಧಾರವಾಡ: ಧಾರವಾಡದ ನಗರ ಪ್ರದೇಶದಲ್ಲಿ ಎರಡು ಹೆಚ್ಚುವಾರಿಯಾಗಿ ಪೊಲೀಸ್ ಠಾಣೆ ನಿರ್ಮಿಸಲು ಅಗ್ರಹಿಸಿ, ಧಾರವಾಡದಲ್ಲಿ ಕರ್ನಾಟಕ ರಕ್ಷಣಾ ವೇದಿಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಕರ್ನಾಟಕ ರಕ್ಷಣಾ ವೇದಿ ಪ್ರವೀಣ ಶೆಟ್ಟಿ ಬಣದ ಬೆಳಗಾವಿ ವಿಭಾಗಿ ಮಾಟ್ಟ ಹಾಗೂ ಧಾರವಾಡ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ,
ಬೇಕೇ ಬೇಕು ಹೆಚ್ಚುವರಿ ಪೊಲೀಸ್ ಠಾಣೆ ಬೇಕು ಎಂದು ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಧಾರವಾಡ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಉತ್ತರ ಕರ್ನಾಟಕದ ವಿದ್ಯಾಕಾಶಿಯಾಗಿರುವ ಜಿಲ್ಲಾ ಕೇಂದ್ರಕ್ಕೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಅರಸಿ ಬರುತ್ತಾರೆ. ಅಲ್ಲದೆ ಈ ನಗರ ಸಾಹಿತಿಗಳ ತವರೂರುಬೆಂದು ಕರೆಯಿಸಿಕೊಳ್ಳುತ್ತದೆ. ಈಗಿರುವ ಪೊಲೀಸ್ ಠಾಣೆಗೆ ಹೆಚ್ಚಿನ ಜವಾಬ್ದಾರಿ ಬೀಳುತ್ತಿದೆ.
ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಒಂದು ಲಾ ಆ್ಯಂಡ್ ಆರ್ಡ್ ಪೊಲೀಸ್ ಬಠಾಣೆ ಹಾಗೂ ಇನ್ನೊಂದು ಸಂಚಾರಿ ಪೊಲೀಸ್ ಠಾಣೆ ತೆರೆಯಬೇಕಾಗಿದೆ. ನಗರದಲ್ಲಿ ದುಷ್ಟ ಶಕ್ತಿಗಳ ಮಟ್ಟಾ ಹಾಕುವ ನಿಟ್ಟಿನಲ್ಲಿ. ಈಬೆರಡು ಪೊಲೀಸ್ ಠಾಣೆಗಳ ಅಶ್ಯಕತೆ ತುಂಬಾ ಇದ್ದು, ಈ ಕೂಡಲೇ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದುಬೆಚ್ಚರಿಕೆ ನೀಡಿದರು.