ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಕಂಬಿ ಎಣಿಸುತ್ತಿದ್ದು, ಇತ್ತೀಚೆಗಷ್ಟೆ ಬಳ್ಳಾರಿ ಜೈಲು ಸೇರಿದ್ದಾರೆ.
ಆನ್ಲೈನ್ ಫುಡ್ ಸೇವಿಸೋ ಮುನ್ನ ಈ ಸ್ಟೋರಿ ನೋಡಿ: ನೂಡಲ್ಸ್ ತಿಂದು ಬಾಲಕಿ ಸಾವು!
ಟಿವಿ ಸಹವಾಸವೇ ಬೇಡ ಅಂತಿದ್ದ ದರ್ಶನ್ ಇದೀಗ ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ ಹೋಗಿದ್ದಾರೆ. ಕೊಲೆ ಆರೋಪಿ ದರ್ಶನ್ಗೆ ಈಗ ಟಿವಿ ಬೇಕು ಎಂದು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಜಾರ್ಜ್ಶೀಟ್ ಸಲ್ಲಿಕೆ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆ ದರ್ಶನ್ ಟಿವಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ದರ್ಶನ್ನನ್ನು ಇರಿಸಿರುವ ಹೈ ಸೆಕ್ಯೂರಿಟಿ ಸೆಲ್ ಬಳಿ ಸಿಬ್ಬಂದಿ ತಿಂಡಿ ಕೊಡಲು ಹೋಗಿದ್ದಾಗ ಚಾರ್ಜ್ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ದರ್ಶನ್ ಪದೇ ಪದೇ ಕೇಳಿದ್ದು, ಮಾಹಿತಿ ಸಿಗದೇ ಇದ್ದಾಗ ಜೈಲು ಸಿಬ್ಬಂದಿ ಬಳಿ ಮಧ್ಯಾಹ್ನದ ಊಟ ಕೊಡಲು ಹೋದಾಗ ಟಿವಿ ಬಗ್ಗೆ ವಿಚಾರಿಸಿದ್ದಾರೆ. ಆಗ ಟಿವಿ ಬೇಕು ಅನ್ನುವುದಾದರೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎಂದು ಸಿಬ್ಬಂದಿ ಹೇಳಿದರು. ಹೀಗಾಗಿ ಟಿವಿ ಬೇಕು ಎಂದು ದರ್ಶನ್ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಜೈಲಿನ ಮ್ಯಾನುವಲ್ ಪ್ರಕಾರ ಕೈದಿಗಳಿಗೆ ಟಿವಿ ಕೊಡುವುದಕ್ಕೆ ಅವಕಾಶ ಇದೆ. ಸದ್ಯ ದರ್ಶನ್ ಸೆಲ್ನಲ್ಲಿ ಟಿವಿ ಇಲ್ಲ. ಈಗ ದರ್ಶನ್ ಸೆಲ್ಗೆ ಟಿವಿ ಕೊಡುವ ಬಗ್ಗೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಮೊದಲು ಟಿವಿ ವಿಚಾರ ತೆಗೆಯುತ್ತಿದಂತೆ ಸಹವಾಸ ಬೇಡ ಅನ್ನೋ ರೀತಿ ಕೈ ಮುಗಿದು ಸೈಲೆಂಟ್ ಆಗುತ್ತಿದ್ದ ದರ್ಶನ್, ಇದೀಗ ಟಿವಿ ಮೊರೆ ಹೋಗಿದ್ದಾರೆ.