ಚಿಂತಾಮಣಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ಶುಶ್ರೂಶಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಮೀಳ ಎಂಬುವವರು ಗರ್ಭಿಣಿ ಸ್ತ್ರೀಯರು ಹೆರಿಗೆಗೆ ಬಂದ ಸಂದರ್ಭದಲ್ಲಿ ಹಣಕ್ಕೆ ಬೇಡಿಕೆ ಇಟ್ಟು ಕಿರಿಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೂಡಲೆ ಇಂಥ ಭ್ರಷ್ಟರನ್ನು ಅಮಾನತ್ತು ಮಾಡುವಂತೆ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗದಲ್ಲಿ ಆಡಳಿತ ವೈದ್ಯಾಧಿಕಾರಿಗಳ ಕಾರ್ಯವೈಕರಿ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮತ್ತು ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಸಂತೋಷ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎನ್.ಶಂಕರ್ ಮಾತನಾಡಿ ಮಂಜುಳಾ ಎಂಬ ಮಹಿಳೆಯು ಬೈರಾಬಂಡ ಗ್ರಾಮದ ಗಾಯತ್ರಿ ಎಂಬುವ ವರನ್ನು ಹೆರಿಗೆ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಶುಷ್ರೂಶಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಮೀಳಾ ಹೆರಿಗೆ ಮಾಡಿಸಲು ಹಣವನ್ನು ನೀಡುವಂತೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಹಣ ಕೊಡುವುದಿಲ್ಲ ಎಂದು ಪ್ರಶ್ನಿಸಿದ ಮಂಜುಳಾ ಎಂಬುವವರನ್ನು ಅಮಾನುಷವಾಗಿ ನಿಂದಿಸಿದ್ದು ಅಂತಹ ಕರ್ತವ್ಯ ಭ್ರಷ್ಟರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು.
ಇದೇ ವೇಳೆಯಲ್ಲಿ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಸಂಘಟನೆ ವತಿಯಿಂದ ಹಲವು ಬೇಡಿಕೆಗಳನ್ನು ಒತ್ತಾಯಿಸುತ್ತೇವೆ ಎಂದ ಅವರು ಆಸ್ಪತ್ರೆಗೆ ಬಂದ ಹೆರಿಗೆ ತಾಯಂದಿರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಬಾರದು, ರಕ್ತ ಪರೀಕ್ಷೆ ಮಾಡಿಸಲು ಖಾಸಗಿ ಲ್ಯಾಬೋರೇಟರಿ ಗಳಿಗೆ ಕಳುಹಿಸುವ ನೀಚ ವ್ಯವಸ್ಥೆಯನ್ನು ಕೈಬಿಡಬೇಕು
,ಔಷಧಿ ಇಲ್ಲವೆಂದು ಮೆಡಿಕಲ್ ಸ್ಟೋರ್ ಗಳಿಗೆ ಬರೆದುಕೊಡುವುದು ನಿಲ್ಲಿಸಬೇಕು,ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಬಳಿ 100- 200 ರೂಪಾಯಿಗಳು ಹಣ ಪಡೆಯುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು,ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು,ಶೌಚಾಲಯಗಳನ್ನು ಸ್ವಚ್ಛತೆಯಿಂದ ಇಡಬೇಕು ಮತ್ತು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೌಜನ್ಯದಿಂದ ಆಸ್ಪತ್ರೆ ಸಿಬ್ಬಂದಿ ವರ್ತಿಸಬೇಕು,ಬಡ ರೋಗಿಗಳ ಮೇಲೆ ದೌರ್ಜನ್ಯ ವೆಸಗುವ ಅಮಾನುಷಯವಾಗಿ ವರ್ತಿಸುವ ಅಸಭ್ಯಕರವಾಗಿ ಮಾತನಾಡುವ ವರ್ತನೆಯಿಂದ ನಡೆದುಕೊಳ್ಳುವ ಯಾವೊಬ್ಬ ನರ್ಸ್ ಅಥವಾ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದ ತಕ್ಷಣ ಅವರನ್ನು ಅಮಾನತ್ತು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಆಸ್ಪತ್ರೆಯ ವ್ಯವಸ್ಥೆಯ ವಿರುದ್ಧ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಡಿಎಸ್ ಎಸ್ ಪದಾಧಿಕಾರಿಗಳಾದ ರೋಹಿಲ್ ತೇಜಾ,ಪವನ್ ,ಅಶೋಕ ನಾರಾಯಣಸ್ವಾಮಿ,ರಮೇಶ,ಶಿವ,
ಕೃಷ್ಣಾ,ಶ್ರೀನಿವಾಸ,ಪೃಥ್ವಿ ಮತ್ತಿತರರು ಹಾಜರಿದ್ದರು.