ಬೆಂಗಳೂರು:- ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟರ್ಮಿನಲ್-2 ವಾಯುವಜ್ರ ಬಸ್ ನಿಲ್ದಾಣ ಉದ್ಘಾಟಿಸಿ ರಾಮಲಿಂಗಾರೆಡ್ಡಿ ಹೇಳಿಕೆ
ಸತೀಶ್ ಜಾರಕಿ ಹೊಳಿ ಡಿಸಿಎಂ ಸ್ಥಾನಕ್ಕೆ ಬೇಡಿಕೆ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಡಿ.ಸಿ.ಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಡಿ.ಸಿ.ಎಂ ಸ್ಥಾನ ಕೊಡೋದು ಬೀಡೋ ತೀರ್ಮಾನ ಹೈಕಮ್ಯಾಂಡ್ ನದ್ದು. ನಾನು ಡಿ.ಸಿ.ಎಂ ಸ್ಥಾನದ ಆಕಾಂಕ್ಷಿ ಅಲ್ಲ ಎಂದರು.
ಇನ್ನೂ ಯತ್ನಾಳ್ ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡೋಕೆ ಬೇರೆ ಏನು ಕೆಲಸ ಇಲ್ಲ. ಯತ್ನಾಳ್ ಯಾರ ಮಾತು ಕೇಳೋದಿಲ್ಲ. ಮನಸ್ಸಿಗೆ ಬರೋದನ್ನ ಹೇಳೋದು ಅವರ ವ್ಯಕ್ತಿತ್ವ. ಮೈಸೂರುಹಕ್ಕಿ ವಿಶ್ವನಾಥ್ ಸಹ ಹಾಗೆಯೇ. ಮನಸ್ಸಿಗೆ ಏನ್ ಬರುತ್ತೋ ಅದನ್ನ ಹೇಳಿಬಿಡ್ತಾರೆ. ಮನಸ್ಸಲ್ಲಿ ಇಟ್ಟಕೊಳ್ಳಲ್ಲ ಅಂತಹವರಲ್ಲಿ ಯತ್ನಾಳ್ ಕೂಡ ಒಬ್ಬರು.
ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಟಾಂಗ್ ನೀಡಿ ಯತ್ನಾಳ್ ಪರ ರಾಮಲಿಂಗಾರೆಡ್ಡಿ ಸಾಫ್ಟ್ ಕಾರ್ನರ್
ಮಾತನಾಡಿದ್ದಾರೆ.